Raichur: ಚಾಡಿ ಹೇಳಿದ ಆರೋಪ: ಐದಾರು ಜನರ ಗುಂಪಿನಿಂದ ವ್ಯಕ್ತಿ ಮೇಲೆ ಹಲ್ಲೆ !

ಚಾಡಿ ಹೇಳಿದ ಆರೋಪದಡಿ ವ್ಯಕ್ತಿ ಮೇಲೆ ಐದಾರು ಜನ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. 
 

Share this Video
  • FB
  • Linkdin
  • Whatsapp

ರಾಯಚೂರು: ಚಾಡಿ ಹೇಳಿದ ಆರೋಪದಡಿಯಲ್ಲಿ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು(Sindhanur) ತಾಲೂಕಿನ ಚಿಕ್ಕಬೇರಗಿ ಗ್ರಾಮದಲ್ಲಿ ನಡೆದಿದೆ. ಐದಾರು ಜನರ ಗುಂಪು ಚಪ್ಪಲಿ, ಕಟ್ಟಿಗೆಯಿಂದ ಹೊಡೆದು ಹಲ್ಲೆ(Attack) ಮಾಡಿದೆ. ಲಿಂಗಪ್ಪ ಎಂಬ ವ್ಯಕ್ತಿ ಹಲ್ಲೆಗೆ ಒಳಗಾಗಿದ್ದಾರೆ. ಅವರನ್ನು ಕಂಬಕ್ಕೆ ಕಟ್ಟಿಹಾಕಿ ಹಿಂಸೆ ನೀಡಲಾಗಿದೆ. ಹಲ್ಲೆಗೊಳಗಾದ ಲಿಂಗಪ್ಪ ಅವರನ್ನು ಸಿಂಧನೂರು ಆಸ್ಪತ್ರೆಗೆ(Hospital) ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದ 9 ಜನರ ವಿರುದ್ಧ ಲಿಂಗಪ್ಪನ ಪತ್ನಿ ನಾಗಮ್ಮ ದೂರು ನೀಡಿದ್ದು, ಈ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹಲ್ಲೆ ಮಾಡುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಅರ್ಚಕರ ಸಂಬಳಕ್ಕೆ ಕತ್ತರಿ ಹಾಕ್ತಾ ಸರ್ಕಾರ? 10 ವರ್ಷದ ಸಂಬಳ ವಾಪಸ್‌ ಕೇಳಿ ಹಿರೇಮಗಳೂರು ಕಣ್ಣನ್‌ಗೆ ನೋಟಿಸ್‌ !

Related Video