ಮೋದಿಗೆ ಮತ್ತೆ ಅಧಿಕಾರ ನೀಡಿದ ಸಮೀಕ್ಷೆ, ಷೇರುಮಾರುಕಟ್ಟೆಯಲ್ಲಿ 14 ಲಕ್ಷ ಕೋಟಿ ರೂ ಲಾಭ!

ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಜಿಗಿತ, ಕೋಟಿ ಕೋಟಿ ಲಾಭ, ಕೊರೋನಾ ಬಳಿ ಬಹುತೇಕ ದೇಶದ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡವರೇ ಹೆಚ್ಚು, ಅರುಣಾಚಲ -ಸಿಕ್ಕಿ ವಿಧಾನಸಭೆ ಚುನಾವಣೆಯಲ್ಲಿ ಯಾರ ಮತಗಟ್ಟೆ ಸಮೀಕ್ಷೆ ಸರಿ, ಅಂಚೆ ಮತ ಎಣಿಕೆ ಮುಗಿಸಿ ಇವಿಎಂ ಮತ ಎಣಿಕೆ ಮಾಡಲು ಇಂಡಿಯಾ ಮೈತ್ರಿ ಆಗ್ರಹ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ 
 

First Published Jun 3, 2024, 11:18 PM IST | Last Updated Jun 3, 2024, 11:18 PM IST

ಲೋಕಸಭಾ ಚುನಾವಣೆ ಕುರಿತು ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಹಾಗೂ ಎನ್‌ಡಿಎ ಪರವಾಗಿ ಅಭಿಪ್ರಾಯ ನೀಡಿದೆ. ಬಿಜೆಪಿ 300 ಸಂಖ್ಯೆ ದಾಟಲಿದೆ ಎಂದರೆ, ಎನ್‌ಡಿಎ 350ಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದೆ ಎಂದಿದೆ. ಈ ಸಮೀಕ್ಷೆ ಹೊರಬಿದ್ದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಭಾರಿ ಜಿಗಿತ ಕಂಡಿದೆ. ಇಂದು ಒಂದೇ ದಿನ ಹೂಡಿಕೆದಾರರಿಗೆ ಬರೋಬ್ಬರಿ 14 ಲಕ್ಷ ಕೋಟಿ ರೂಪಾಯಿ ಲಾಭವಾಗಿದೆ. ಇತ್ತೀಚೆಗೆ ಸಟ್ಟಾ ಬಜಾರ್ ಮೋದಿಗೆ ಅಧಿಕಾರ ಅನುಮಾನ ಎಂದ ಬೆನ್ನಲ್ಲೇ ಮೂರೂವರೆ ಲಕ್ಷ ಕೋಟಿ ರೂಪಾಯಿ ನಷ್ಟವಾಗಿತ್ತು. ಆದರೆ ಇದೀಗ ಹೊಸ ದಾಖಲೆ ನಿರ್ಮಾಣವಾಗಿದೆ.

Video Top Stories