Exit Poll: ನರೇಂದ್ರ ಮೋದಿಗೆ ಮೂರನೇ ಬಾರಿ ಪ್ರಧಾನಿ ಸೀಟ್‌, ರಾಜ್ಯದಲ್ಲಿ ಕಾಂಗ್ರೆಸ್‌ಗಿಲ್ಲ ಡಬಲ್‌ ಡಿಜಿಟ್‌!


ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿ ಗಾದಿಗೆ ಏರೋದು ಖಚಿತವಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಡಬಲ್‌ ಡಿಜಿಟ್‌ ದಾಟೋದಿಲ್ಲ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
 

First Published Jun 1, 2024, 10:40 PM IST | Last Updated Jun 1, 2024, 10:45 PM IST

ಬೆಂಗಳೂರು (ಜೂ.1): ಕಳೆದ ಎರಡು ಲೋಕಸಭಾ ಚುನಾವಣೆಯಂತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಇಂಡಿ ಮೈತ್ರಿಕೂಟಕ್ಕೆ ಸೋಲು ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಇನ್ನೊಂದೆಡೆ ಕರ್ನಾಟಕದಲ್ಲಿ ಟಾರ್ಗೆಟ್‌ 20 ನಿರೀಕ್ಷೆ ಇಟ್ಟಿದ್ದ ಕಾಂಗ್ರೆಸ್‌ ಡಬಲ್‌ ಡಿಜಿಟ್‌ ಮುಟ್ಟೋದು ಅನುಮಾನ ಎನ್ನಲಾಗಿದೆ.

ಆಂಧ್ರಪ್ರದೇಶದಲ್ಲಿ ಎನ್‌ಡಿಎ 19-22 ಸೀಟ್‌ ಗೆಲ್ಲಬಹುದು ಎಂದು ನ್ಯೂಸ್‌-18 ಮೆಗಾ ಎಕ್ಸಿಟ್‌ ಪೋಲ್‌ ಹೇಳಿದ್ದರೆ, ಜನ್‌ ಕೀಬಾತ್‌ (10-14), ಎಬಿಸಿ-ಸಿ ವೋಟರ್‌ (21-25), ಇಂಡಿಯಾ ಟುಡೇ-ಆಕ್ಸಿಸ್‌ (ಬಿಜೆಪಿ 4-6) ಕೂಡ ಬಿಜೆಪಿ ಗೆಲ್ಲುವ ಪ್ರೆಡಿಕ್ಷನ್‌ ಮಾಡಿದೆ. ಇನ್ನು ತಮಿಳುನಾಡಿನಲ್ಲೂ ಬಹುತೇಕ ಎಕ್ಸಿಟ್‌ ಪೋಲ್‌ಗಳು ಬಿಜೆಪಿ ಇಲ್ಲಿ ಖಾತೆ ತೆರೆಯುವ ಸಾಧ್ಯತೆ ಇದೆ ಎಂದಿದೆ. ಕೇರಳ ವಿಚಾರದಲ್ಲೂ ಬಿಜೆಪಿಗೆ ಇದೇ ರೀತಿಯ ಪೋಲ್‌ ರಿಸಲ್ಟ್‌ ಬಂದಿದೆ. ತೆಲಂಗಾಣದಲ್ಲೂ ಕೂಡ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಬಹುದು ಎನ್ನಲಾಗಿದೆ.

ಗ್ಯಾರಂಟಿ ಕೊಟ್ಟಿದ್ದೇವೆ, ಕನಿಷ್ಠ 14 ಗೆಲ್ತೇವೆ, 5-6 ಸೀಟ್‌ ನಂಬೋಕೆ ಸಾಧ್ಯವಿಲ್ಲ: ಎಂಬಿ ಪಾಟೀಲ್‌!

ಇನ್ನು ರಾಷ್ಟ್ರ ಮಟ್ಟದಲ್ಲಿ ಲೋಕ್‌ ಪೋಲ್‌ ಪ್ರೆಡಿಕ್ಷನ್‌ ಮಾಡಿರುವ 325 ಸೀಟ್‌ಗಳೇ ಬಿಜೆಪಿಗೆ ಕನಿಷ್ಠವಾಗಿದೆ. ಇನ್ನು ಟುಡೇಸ್‌ ಚಾಣಕ್ಯ ಹಾಗೂ ಇಂಡಿಯಾ ಟುಡೇ ಎನ್‌ಡಿಎ ಕ್ರಮವಾಗಿ 400 ಹಾಗೂ 401 ಸೀಟ್‌ ಗೆಲ್ಲಬಹುದು ಎಂದು ಹೇಳಿದೆ.