ಮುಂದಿನ ದಿನಗಳಲ್ಲಿ ಹೇಗೆಲ್ಲ ಸಾಗಲಿದ ಪೂಜಾ ವಿಧಾನ..? ಜ್ಞಾನವಾಪಿಯಲ್ಲಿ ಇನ್ನು ಶಿವನ ಧ್ಯಾನ !

ಜ್ಞಾನವಾಪಿಯಲ್ಲಿ ಹಿಂದೂಗಳ ಪ್ರಾರ್ಥನೆಗೆ ಸಿಕ್ತು ಅವಕಾಶ
ಈ ಹಿಂದೆ ಕಾಶಿಯ  ಜ್ಞಾನವಾಪಿಯಲ್ಲಿ ಪೂಜೆ ನಿಂತಿದ್ದು ಏಕೆ? 
ಪೂಜೆ ನಿಂತಿದ್ದರ ಹಿಂದಿರುವ ರಕ್ತ ಸಿಕ್ತ ಇತಿಹಾಸವೇನು..? 

Share this Video
  • FB
  • Linkdin
  • Whatsapp

ಹಿಂದೂಗಳ ಆಸೆಯದಂತೆ ಕಳೆದ ತಿಂಗಳಷ್ಟೇ ರಾಮ ಮಂದಿರ ಉದ್ಘಾಟನೆ ಆಯಿತು. ಈ ಮೂಲಕ ಐದನೂರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿತ್ತು.ಸೋ ಈಗ ಹಿಂದೂಗಳಲ್ಲಿ ಜೈ ಶ್ರೀರಾಮ ನಂತರ ಹರ ಹರ ಮಹಾದೇವ್ ಎಂದು ಘೋಷಣೆ ಮೊಳಗುತ್ತಿದೆ. ಇದರ ಬೆನ್ನಲ್ಲೇ ನಿನ್ನೆಯಷ್ಟೇ ಜ್ಞಾನವಾಪಿಯಲ್ಲಿ( Gyanvapi Masjid) ಸ್ಥಳೀಯ ಕೋರ್ಟ್ ಪೂಜೆಗೆ ಅವಕಾಶ ಕೊಟ್ಟಿದೆ. ಈ ತೀರ್ಪಿನಿಂದ ಹಿಂದೂಗಳು ಹರ್ಷಿತರಾಗಿದ್ದಾರೆ. ಇದು ಜ್ಞಾನವಾಪಿಯಲ್ಲಿ ಮೊಳಗಿದ ಪೂಜಾ ಸಂಭ್ರಮ. ಸ್ಥಳೀಯ ಕೋರ್ಟ್‌ನಿಂದ ಪೂಜೆಗೆ ಅವಕಾಶ ಸಿಕ್ಕ ನಂತರ ಶಿವಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ತಡ ಮಾಡದೇ ಜ್ಞಾನವಾಪಿ ಮಂದಿರ ನೆಲಮಾಳಿಗೆಯಲ್ಲಿರುವ ಶೃಂಗಾರಗೌರಿಗೆ(Shringar Gauri)ಪೂಜೆ ನೆರವೇರಿಸಿದ್ದಾರೆ.ಅರ್ಚಕರು ಪೂಜೆ ನೆರವೇರಿಸಿದ್ದಾರೆ. ಅರ್ಚಕರ ಪೂಜೆಯ ನಂತರ ಸತತ 30 ವರ್ಷಗಳಿಂದ ಈ ಸಂದರ್ಭಕ್ಕಾಗಿ ತುದಿಗಾಲಲ್ಲಿ ಕಾದು ನಿಂತಿದ್ದ ಶಿವನ ಭಕ್ತರು, ನಿನ್ನೆ ರಾತ್ರಿಯೇ ಶೃಂಗಾರ ಗೌರಿಗೆ ಪೂಜೆ(Worship) ಸಲ್ಲಿಸಿದ್ದಾರೆ. ಈ ಸುಂದರ ಕ್ಷಣಕ್ಕಾಗಿ ಹಿಂದೂಗಳು(Hindus) ತಾಳ್ಮೆಯಿಂದ ಹೋರಾಟ ಮಾಡಿದ್ದು ಬರೋಬ್ಬರಿ 30 ವರ್ಷಗಳ ಕಾಲ.

ಇದನ್ನೂ ವೀಕ್ಷಿಸಿ: ವಿಕಸಿತ ಭಾರತಕ್ಕೆ ಮೋದಿ ದೂರದೃಷ್ಟಿ ಹೇಗಿದೆ..? ನೋ ಆಫರ್..ಬಟ್ ಬಂಪರ್..!

Related Video