ವಿಕಸಿತ ಭಾರತಕ್ಕೆ ಮೋದಿ ದೂರದೃಷ್ಟಿ ಹೇಗಿದೆ..? ನೋ ಆಫರ್..ಬಟ್ ಬಂಪರ್..!
2047ಕ್ಕೆ ವಿಕಸಿತ ಭಾರತ ನಿರ್ಮಾಣದ ಗುರಿ..!
ಮಹಿಳಾ ‘ಪ್ರಬಲೀಕರಣ’ಕ್ಕೆ ಮೋದಿ ಉತ್ಸುಕ..!
ದೇಶದ ಬೆನ್ನೆಲುಬಿಗೆ ಮೋದಿ ಅಭಯ ಹಸ್ತ..!
ಮನೆ ನಿರ್ಮಾಣದೊಂದಿಗೆ ವಿದ್ಯುತ್ ಕ್ರಾಂತಿ..!
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಮಂಡನೆಯಾಗಿದೆ. ಲೋಕಸಭಾ(Loksabha) ಚುನಾವಣೆ ಹತ್ತಿರವಿರೋದ್ರಿಂದ ಜನಪ್ರಿಯವಾಗಬಲ್ಲ ಯೋಜನೆಗಳನ್ನ ಮೋದಿ ಸರ್ಕಾರ(Modi governemnt) ಘೋಷಣೆ ಮಾಡುತ್ತೆ ಅಂದ್ಕೊಂಡಿರೋರ ನಿರೀಕ್ಷೆ ಹುಸಿಯಾಗಿದೆ. 2047ರ ವೇಳೆಗೆ ಭಾರತವನ್ನ ವಿಕಸಿತ ಭಾರತವನ್ನಾಗಿಸೋ ಗುರಿ ಹೊಂದಿರುವ ಮೋದಿ ಸರ್ಕಾರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದಂತೆ ಕಾಣ್ತಿದೆ. ಬಜೆಟ್ ಬಳಿಕ ಮಾತನ್ನಾಡಿದ ಮೋದಿ ಅವರ ಮುಂದಿನ ಗುರಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಬಜೆಟ್ ಮಂಡಿಸಿದೆ. ಸಾಕಷ್ಟು ದೂರದೃಷ್ಟಿಯನ್ನ ಇಟ್ಕೊಂಡೇ ಇಡೀ ಭಾರತ ಎದುರು ನೋಡ್ತಾ ಇದ್ದ ಬಜೆಟ್ ದೇಶಾದ್ಯಂತ ಚರ್ಚೆಯನ್ನ ಹುಟ್ಟು ಹಾಕಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳ ನಡುವೆ ನರೇಂದ್ರ ಮೋದಿ ತಮ್ಮ ಸರ್ಕಾರದ ಬಜೆಟ್ ಬಗ್ಗೆ ತುಂಬಾ ಆತ್ಮವಿಶ್ವಾಸದ ಮಾತನಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಜ್ಞಾನವಾಪಿಯಲ್ಲಿ 31 ವರ್ಷದ ಬಳಿಕ ಮೊದಲ ಪೂಜೆ: ಮಧ್ಯರಾತ್ರಿ ಭಕ್ತರಿಂದ ಹರಹರ ಮಹದೇವ ಘೋಷಣೆ