ಅಯೋಧ್ಯೆ ರೀತಿ ಕೋರ್ಟ್‌ನಲ್ಲಿಯೇ ಇತ್ಯರ್ಥವಾಗಲಿದ್ದಾನೆ ಕಾಶಿ ವಿಶ್ವನಾಥ!
ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ಬಳಿಕ ಅಲ್ಲಿನ ಶ್ರೀರಾಮಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಂಡಂತೆ, ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥನ ಮಂದಿರ ಬಗ್ಗೆಯೂ ಕೋರ್ಟ್ ನಿರ್ಧಾರ ಮಾಡಲಿದೆ. ಹಿಂದುಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹ ಎಂದು ಕೋರ್ಟ್ ತೀರ್ಪು ನೀಡಿರುವುದು ಈ ನಿಟ್ಟಿನಲ್ಲಿ ಆಗಿರುವ ಅತ್ಯಂತ ಮಹತ್ವದ ಬೆಳವಣಿಗೆ.
ಬೆಂಗಳೂರು (ಸೆ.13): ಜ್ಞಾನವಾಪಿ ವಿಚಾರಣೆಗೆ ಅಸ್ತು ಅಂದಾಯ್ತು ವಾರಣಾಸಿ ನ್ಯಾಯಾಲಯ.. ಹಿಂದೂ ಮನವಿಗೆ ಪುರಸ್ಕಾರವೇನೋ ಸಿಕ್ಕಾಯ್ತು.. ಆದ್ರೆ ಮುಂದೇನು..? ವರ್ಷದ 365 ದಿನವೂ ನಡೆಯುತ್ತಾ ಜ್ಞಾನವಾಪಿಯಲ್ಲಿರೋ ಶೃಂಗಾರ ಗೌರಿ ಪೂಜೆ..? ಈಗಷ್ಟೇ ಇಂಟರ್ವಲ್ ತಲುಪಿರೋ ಕಥೆಯ ಕ್ಲೈಮ್ಯಾಕ್ಸ್ ಏನಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಕಾಡಿದೆ.
ಜ್ಞಾನವಾಪಿ ಪ್ರಕರಣದಲ್ಲಿ ಈಗ ಬಂದಿರೋ ತೀರ್ಪು ಸಾಕಷ್ಟು ಕುತೂಹಲ ಮೂಡಿಸಿದೆ.. ಇಲ್ಲಿಂದ ಕತೆ ಮತ್ತೊಂದು ದಿಕ್ಕು ಬದಲಿಸೋ ಸಾಧ್ಯತೆ ಇದೆ.. ಸೆಪ್ಟಂಬರ್ 22ರಿಂದ ಶುರುವಾಗಲಿರೋ ವಿಚಾರಣೆ, ಇಡೀ ದೇಶದ ಭವಿಷ್ಯವನ್ನೇ ನಿರ್ಧರಿಸಲಿದೆ. ಜ್ಞಾನವಾಪಿ ಅಂತಿಮ ತೀರ್ಪು ಆಚೆ ಬರೋದು ಯಾವಾಗಲೋ ಗೊತ್ತಿಲ್ಲ. ಆದ್ರೆ, ಅದಕ್ಕೂ ಮುನ್ನ, ವಿಚಾರಣೆಯ ಅರ್ಜಿ ಸ್ವೀಕರಿಸಿದ್ದೇ ಅತಿ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ.
Gyanvapi Masjid Verdict: ಹಿಂದುಗಳ ಅರ್ಜಿ ವಿಚಾರಣೆಗೆ ಅರ್ಹ, ವಾರಣಾಸಿ ಕೋರ್ಟ್ ಮಹತ್ವದ ತೀರ್ಪು!
ಅಯೋಧ್ಯೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲ ದಶಕಗಳ ಕಾಲ ವಿಚಾರಣೆ ನಡೆದು ಕೆಲ ವರ್ಷಗಳ ಹಿಂದೆ ಅದರ ಅಂತಿಮ ತೀರ್ಪು ಬಂದಿತ್ತು.ಜ್ಞಾನವಾಪಿ ವಿಚಾರದಲ್ಲಿ ಇದು ಮೊದಲ ಹೆಜ್ಜೆ. ಆದರೆ, ಮುಂದೊಂದು ದಿನ ಖಂಡಿತವಾಗಿ ಕಾಶಿ ವಿಶ್ವನಾಥನ ಮಂದಿರ ಹಿಂದುಗಳಿಗೆ ಸೇರಲಿದೆ ಎನ್ನುವ ವಿಶ್ವಾಸದಲ್ಲಿ ಅಪಾರ ಭಕ್ತರಿದ್ದಾರೆ.