Asianet Suvarna News Asianet Suvarna News

Gyanvapi Masjid Verdict: ಹಿಂದುಗಳ ಅರ್ಜಿ ವಿಚಾರಣೆಗೆ ಅರ್ಹ, ವಾರಣಾಸಿ ಕೋರ್ಟ್‌ ಮಹತ್ವದ ತೀರ್ಪು!

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದುಗಳು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅರ್ಹ ಎಂದು ವಾರಣಾಸಿ ಜಿಲ್ಲಾ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
 

Gyanvapi Mosque Case Varanasi court decision on maintainability stands in favour of Hindu side san
Author
First Published Sep 12, 2022, 2:27 PM IST

ವಾರಣಾಸಿ (ಸೆ. 12): ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಜ್ಞಾನವಾಪಿ ಮಸೀದಿಯ ಕಾಂಪೌಂಡ್‌ನಲ್ಲಿ ಪೂಜೆ ಮಾಡುವ ಹಕ್ಕುಗಳನ್ನು ಕೋರಿ ಐವರು ಹಿಂದೂ ಮಹಿಳೆಯರು  ಸಲ್ಲಿಸಿರುವ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.ಹಿಂದುಗಳು ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಒಳಪಡಬಾರದು ಎಂದು ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಕೋರ್ಟ್‌ ಮೆಟ್ಟಿಲೇರಿತ್ತು. ಈ ಕುರಿತಾಗಿ ತೀರ್ಪು ನೀಡಿರುವ ಕೋರ್ಟ್‌, ಈ ಅರ್ಜಿಯು ವಿಚಾರಣೆಗೆ ಅರ್ಹವಾಗಿದ್ದು, ಸೆಪ್ಟೆಂಬರ್‌ 22 ರಿಂದ ಪ್ರಕರಣದ ವಿಚಾರಣೆ ಆರಂಭ ಮಾಡುವುದಾಗಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್  ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಅದರೊಂದಿಗೆ ಜ್ಞಾನವಾಪಿ ಮಸೀದಿಯ ಹೊರ ಆವರಣದಲ್ಲಿರುವ ಗೋಡೆಗಳ ಮೇಲಿನ ಹಿಂದೂ ದೇವತೆಗಳನ್ನು ಪೂಜೆ ಮಾಡಲು ದೆಹಲಿ ಮೂಲದ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ವಾರಣಾಸಿ ಜಿಲ್ಲಾ ಕೋರ್ಟ್‌ ಸೋಮವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಹಿಂದುಗಳು ಸಲ್ಲಿರುವ ಅರ್ಜಿ ವಿಚಾರಣೆಗೆ ಅರ್ಹ ಎನ್ನುವ ಮಹತ್ವದ ತೀರ್ಪು ನೀಡಿದೆ. ಇದರ ಬೆನ್ನಲ್ಲಿಯೇ ವಾರಣಾಸಿಯಲ್ಲಿ ಹಿಂದುಗಳ ಸಂಭ್ರಮ ಮುಗಿಲು ಮುಟ್ಟಿದೆ.

ವಾರಣಾಸಿಯ ಜ್ಞಾನವಾಪಿ-ಶೃಂಗಾರ ಗೌರಿ ವಿವಾದದ (Gyanvapi Masjid and Shringar Gauri Temple controversy) ಮುಂದಿನ ವಿಚಾರಣೆ ಮುಂದುವರಿಯಲಿದೆ. ಈ ಪ್ರಕರಣವು ವಿಚಾರಣೆಗೆ ಯೋಗ್ಯವಾಗಿದೆ ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಹೇಳಿದೆ. ಹಿಂದೂಗಳ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದ್ದು, ಮುಸ್ಲಿಂ ಕಡೆಯ ಆಕ್ಷೇಪಗಳನ್ನು ತಿರಸ್ಕರಿಸಿದೆ ಎಂದು ವಿಶ್ವ ವೈದಿಕ ಸನತ್ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ಬಿಸೆನ್ ತಿಳಿಸಿದ್ದಾರೆ. ಸೆಪ್ಟೆಂಬರ್ 22 ರಂದು ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.



ನ್ಯಾಯಾಲಯದ ತೀರ್ಪಿನ ವೇಳೆ, ಹಿಂದೂ ಪರ ವಕೀಲರಾದ ಹರಿಶಂಕರ್ ಜೈನ್ (Harishankar Jain) ಮತ್ತು ವಿಷ್ಣು ಶಂಕರ್ ಜೈನ್ (Vishnu Shankar Jain ) ನ್ಯಾಯಾಲಯದಲ್ಲಿ ಹಾಜರಿದ್ದರು. ಆದರೆ, ಮುಖ್ಯ ಅರ್ಜಿದಾರರಾದ ರಾಖಿ ಸಿಂಗ್ (Rakhi Singh) ಅವರು ನ್ಯಾಯಾಲಯಕ್ಕೆ (Varanasi Court) ಹಾಜರಾಗಿರಲಿಲ್ಲ. ನ್ಯಾಯಾಲಯದಲ್ಲಿ ಒಟ್ಟು 62 ಮಂದಿಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಆಗಸ್ಟ್ 24 ರಂದು, ಜ್ಞಾನವಾಪಿ ಮಸೀದಿಯ (Gyanvapi Masjid) ಆವರಣದಲ್ಲಿರುವ ಶೃಂಗಾರ್ ಗೌರಿ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ನೀಡುವಂತೆ ಹಿಂದೂ ಮತ್ತು ಮುಸ್ಲಿಂ ಕಡೆಯ ವಾದವನ್ನು ಮುಕ್ತಾಯಗೊಳಿಸಲಾಯಿತು. ಇದಾದ ಬಳಿಕ ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ (district judge AK Vishwas) ಅವರು ತೀರ್ಪನ್ನು ಸೆಪ್ಟೆಂಬರ್ 12ಕ್ಕೆ ಅಂದರೆ ಇಂದಿನವರೆಗೆ ಕಾಯ್ದಿರಿಸಿದ್ದರು.

ಅತ್ಯಂತ ಸೂಕ್ಷ್ಮ ಎಂದು ಪರಿಗಣಿಸಲಾಗಿರುವ ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ನಗರದಲ್ಲಿ ಹಿಂದೂ-ಮುಸ್ಲಿಂ ಮಿಶ್ರಿತ ಜನಸಂಖ್ಯೆ ಇರುವ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಆದೇಶದ ನಂತರ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾರಣಕ್ಕೆ ನಿನ್ನೆ ರಾತ್ರಿಯಿಂದಲೇ ಕೆಲ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ.

Gyanvapi Case: ಕಾಶಿ ಧರ್ಮಯುದ್ಧಕ್ಕೆ ಕೌಂಟ್‌ಡೌನ್‌, ನಾಳೆ ತೀರ್ಪು ಪ್ರಕಟಿಸಲಿರುವ ಜಿಲ್ಲಾ ಕೋರ್ಟ್‌!

ಜ್ಞಾನವಾಪಿ-ಶೃಂಗಾರ ಗೌರಿಗೆ ಸಂಬಂಧಿಸಿದ ಪ್ರಕರಣವೇನು?: ಐವರು ಹಿಂದೂ ಮಹಿಳೆಯರು ಜ್ಞಾನವಾಪಿ ಮಸೀದಿ ಆವರಣದಲ್ಲಿ ಇರುವ ಹಿಂದೂ ದೇವತೆಗಳನ್ನು ಪೂಜಿಸಲು ಅನುಮತಿ ಕೋರಿದ್ದಾರೆ. ಈ ಮಹಿಳೆಯರು ವಿಶೇಷವಾಗಿ ಶೃಂಗಾರ್ ಗೌರಿಯನ್ನು ಪ್ರತಿದಿನ ಪೂಜಿಸಲು ಅನುಮತಿ ನೀಡುವಂತೆ ಕೋರಿದರು. ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಯಲ್ಲೂ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯ ನಂತರ, ಹಿಂದೂ ಕಡೆಯವರು ಮಸೀದಿಯ ನೆಲಮಾಳಿಗೆಯಲ್ಲಿ ಶಿವಲಿಂಗವಿದೆ ಎಂದು ಹೇಳಿದರೆ, ಮುಸ್ಲಿಂ ಕಡೆಯವರು ಅದನ್ನು ಕಾರಂಜಿ ಎಂದು ಹೇಳಿದ್ದರು.

ಗ್ಯಾನವಾಪಿ ಪ್ರಕರಣದಲ್ಲಿ ವಿಚಾರಣೆ ಮುಕ್ತಾಯ, ಸೆ. 12ಕ್ಕೆ ತೀರ್ಪು?

18 ಆಗಸ್ಟ್ 2021 ರಂದು, ಐವರು ಮಹಿಳೆಯರು, ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ಆವರಣದಲ್ಲಿ ಇರುವ ಇತರ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ಕೋರಿ ವಾರಣಾಸಿ ಕೋರ್ಟ್‌ನ ಮೆಟ್ಟಿಲೇರಿತ್ತು. ಈಗ ಇಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತದೆ. ಈ ಐದು ಅರ್ಜಿದಾರರ ನೇತೃತ್ವವನ್ನು ದೆಹಲಿಯ ರಾಖಿ ಸಿಂಗ್  ವಹಿಸಿದ್ದಾರೆ, ಉಳಿದ ನಾಲ್ವರು ಮಹಿಳೆಯರು ಸೀತಾ ಸಾಹು, ಮಂಜು ವ್ಯಾಸ್, ಲಕ್ಷ್ಮಿ ದೇವಿ ಮತ್ತು ಬನಾರಸ್‌ನ ರೇಖಾ ಪಾಠಕ್. 26 ಏಪ್ರಿಲ್ 2022 ರಂದು, ವಾರಣಾಸಿ ಸಿವಿಲ್ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಶೃಂಗಾರ್ ಗೌರಿ ಮತ್ತು ಇತರ ದೇವತೆಗಳ ಪರಿಶೀಲನೆಗಾಗಿ ವೀಡಿಯೊಗ್ರಫಿ ಮತ್ತು ಸಮೀಕ್ಷೆಗೆ ಆದೇಶಿಸಿತ್ತು.

Follow Us:
Download App:
  • android
  • ios