
Left Right & Centre: ಏನಿದು ಅಗ್ನಿಪಥ ಯೋಜನೆ? ಯಾಕಿಷ್ಟು ವಿರೋಧ?
ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಬಿಹಾರ, ರಾಜಸ್ಥಾನ, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಸಾವರ್ಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ ಘಟನೆಯೂ ನಡೆದಿದೆ. ಅದರಲ್ಲೂ ಬಿಹಾರ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ.
ಬೆಂಗಳೂರು (ಜೂನ್ 17): ಕೆಲ ದಿನಗಳ ಹಿಂದೆ ಇನ್ನೇನು ಪಿಯುಸಿ ಮುಗಿಸುವ ಹುಡುಗರಿಗಾಗಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯನ್ನು (Agnipath Scheme ) ಘೋಷಣೆ ಮಾಡಿತ್ತು. ಆದರೆ, ಇದರ ನೀತಿ ನಿಯಮಾವಳಿಗಳ ಕುರಿತಾಗಿ ಊಹಾಪೋಹಗಳನ್ನು ನಂಬಿದ ದೇಶದ ಯುವ ಜನತೆ ಪ್ರತಿಭಟನೆಗೆ ಮುಂದಾಗಿದೆ.
ಸತತ ಮೂರು ದಿನಗಳಿಂದ ಈ ಪ್ರತಿಭಟನೆಗಳು ನಡೆಯುತ್ತಿದ್ದು ಬಿಹಾರ (Bihar) ಅಕ್ಷರಶಃ ಕುದಿಕುದಿಯಾಗಿದೆ. ಉಳಿದಂತೆ ರಾಜಸ್ಥಾನ, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ ಸಾಕಷ್ಟು ಘಟನೆಗಳು ನಡೆದಿವೆ. ಸಾಕಷ್ಟು ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಸ್ವತಃ ರೈಲ್ವೆ ಸಚಿವ, ಯಾವುದೇ ರೈಲುಗಳಿಗೆ ಹಾನಿ ಮಾಡದಂತೆ ಮನವಿ ಮಾಡಿದ್ದಾರೆ.
Agnipath Scheme ರೈಲ್ವೆ ಟಿಕೆಟ್ ಕಲೆಕ್ಟರ್‌ನಿಂದ 3 ಲಕ್ಷ ಲೂಟಿ ಮಾಡಿದ ಪ್ರತಿಭಟನಾಕಾರರು!
ಇದರ ನಡುವೆ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಮುಖ್ಯಸ್ಥರು ಅಗ್ನಿಪಥ ಯೋಜನೆಯ ಅಡಿಯಲ್ಲಿ ಅಗ್ನಿವೀರರನ್ನು ಆಯಾಸೇನೆಗೆ ನೇಮಕ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಅದರಂತೆ ಜೂನ್ 24 ರಿಂದ ವಾಯುಸೇನೆಯ ಪ್ರಕ್ರಿಯೆ ಆರಂಭವಾಗಲಿದ್ದರೆ, ಇನ್ನೆರಡು ದಿನದಲ್ಲಿ ಭೂಸೇನೆಯ ನೋಟಿಫಿಕೇಶನ್ ಬರಲಿದೆ ಎಂದು ತಿಳಿಸಿದ್ದಾರೆ.