RIP Lata Mangeshkar:ಕನ್ನಡ ನಾಡಿನೊಂದಿಗೆ ಲತಾ ಫ್ಯಾಮಿಲಿಯ ಬಾಂಧವ್ಯ,  ಹಾಡು ಸ್ಮರಿಸಿದ ಶಿವಣ್ಣ

* ಗಾನಕೋಗಿಲೆ ಲತಾ ಮಂಗೇಶ್ಕರ್  ವಿಧಿವಶ
* ಎಲ್ಲ ಬಗೆಯ ಗೀತೆಗಳ ಮೇಲೆ ಹಿಡಿತ
* ದಿವ್ಯ ಚೇತನಕ್ಕೆ ಸಂಗೀತ ನಮನ
* ಎರಡು ದಿನದಲ್ಲಿ ದೇಶದಲ್ಲಿ ಶೋಕಾರಚರಣೆ

First Published Feb 6, 2022, 6:41 PM IST | Last Updated Feb 6, 2022, 6:41 PM IST

ಬೆಂಗಳೂರು (ಫೆ. 6):  ಸಂಗೀತ ಲೋಕದ ತಾರೆ, ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಭಾನುವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shivaraj Kumar) ಹಾಡಿನ ಮೂಲಕವೇ ನಮನ ಸಲ್ಲಿಸಿದ್ದಾರೆ.

ಲತಾ ಮಂಗೇಶ್ಕರ್ ಜೀವನದ ಪುಟಗಳು

ಸಿಎಂ ಬೊಮ್ಮಾಯಿ ಸಹ ಲತಾ ಅವರ ಹಾಡಿನ ಸಾಲುಗಳನ್ನು ಸ್ಮರಣೆ ಮಾಡಿಕೊಂಡಿದ್ದಾರೆ.  ಲತಾ ಸಹೋದರಿ ಉಷಾ ಮಂಗೇಶ್ಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಂತಾಪ ತಿಳಿಸಿದ್ದಾರೆ.  ರಾಜ್ಯ ಸರ್ಕಾರದಿಂದ 2 ದಿನಗಳ ಕಾಲ ಶೋಕಾಚರಣೆ ನಿರ್ಧಾರ ಮಾಡಲಾಗಿದ್ದು ಯಾವುದೇ ಸಾರ್ವಜನಿಕ  ಮತ್ತು ಮನರಂಜನಾ ಕಾರ್ಯಕ್ರಮಕ್ಕೆ ಅವಾಶ ಇಲ್ಲ.