Lalu Prasad Yadav on Modi: "ಮೋದಿ ಕಾ ಪರಿವಾರ್"ನಲ್ಲಿದ್ದಾರೆ 6 ಮಂದಿ ..! ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಒಡಹುಟ್ಟಿದವರು ?

ಖಾಸಗಿ ಕಂಪನಿಯಲ್ಲಿ ಫಿಟ್ಟರ್‌ ಆಗಿದ್ದರು ಮೋದಿಯವರ 2ನೇ ಅಣ್ಣ..!
ಒಬ್ಬ ತಮ್ಮ ದಿನಸಿ ವ್ಯಾಪಾರಿ.., ಮತ್ತೊಬ್ಬರು ನಿವೃತ್ತ ಸರ್ಕಾರಿ ನೌಕರ..!
ಮೋದಿ ಪ್ರಧಾನಿಯಾದ್ರೂ ಒಡಹುಟ್ಟಿದವರದ್ದು ಇಂದಿಗೂ ಸರಳ ಜೀವನ..!

Share this Video
  • FB
  • Linkdin
  • Whatsapp

ಗುಜರಾತ್‌ನ ವಡ್ನಾಗರ್(Gujarat) ರೈಲ್ವೇ ನಿಲ್ದಾಣದಲ್ಲಿ ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದ ಹುಡುಗನೀಗ, ಇಡೀ ದೇಶವೇ ಮೆಚ್ಚಿದ ಪ್ರಧಾನಿ, ಜಗತ್ತೇ ಜೈ ಅನ್ನೋ ನಾಯಕ. ಪ್ರಧಾನಿ ನರೇಂದ್ರ ಮೋದಿಯವರು(Narendra Modi) ರಾಷ್ಟ್ರ ರಾಜಕಾರಣದ ಮೋಸ್ಟ್ ಪವರ್"ಫುಲ್ ಲೀಡರ್. ಅವರ ಒಂದು ಮಾತಿಗೆ ಇಡೀ ದೇಶ ಪ್ರತಿಕ್ರಿಯಿಸತ್ತೆ, ಅವರ ಒಂದು ಕಣ್ಸನ್ನೆಗೆ ದೇಶವಾಸಿಗಳು ಸ್ಪಂದಿಸ್ತಾರೆ. ಅದು ಮೋದಿಯವರು ಕಳೆದ 10 ವರ್ಷಗಳಲ್ಲಿ ಸಂಪಾದಿಸಿದ ಜನರ ಪ್ರೀತಿ ಮತ್ತು ಅಭಿಮಾನ. ವಸುದೈವ ಕುಟುಂಬಕಂ ಅನ್ನೋ ಮಾತಿನಲ್ಲಿ ನಂಬಿಕೆ ಇಟ್ಟಿರೋ ಮೋದಿಯವರಿಗೂ ಒಂದು ಸ್ವಂತ ಕುಟುಂಬವಿದೆ. ಅವ್ರಿಗೂ ನಾಲ್ಕು ಮಂದಿ ಒಡ ಹುಟ್ಟಿದವರಿದ್ದಾರೆ. ಜಗತ್ತಿನ ಪಾಲಿಗೆ ಅಪರಿಚಿತರಾಗಿಯೇ ಉಳಿದಿರೋ ಮೋದಿಯವರ ಒಡಹುಟ್ಟಿದವರ ಪರಿಚಯ ಮಾಡಿಕೊಡ್ತೀವಿ. ಆದ್ರೆ ಅದಕ್ಕೂ ಮುಂಚೆ ಈಗ ಇದ್ದಕ್ಕಿದ್ದಂತೆ ಪ್ರಧಾನಿ ಮೋದಿಯವರ ಕುಟುಂಬದ ಬಗ್ಗೆ ಪ್ರಶ್ನೆ ಎದ್ದದ್ದು ಯಾಕೆ ಅನ್ನೋದನ್ನು ನೀವು ನೋಡ್ಲೇಬೇಕು.

ಇದನ್ನೂ ವೀಕ್ಷಿಸಿ: PM southern states Tour: ಲೋಕ ಸಮರ ಗೆಲ್ಲಲು ಮತ್ತೆ ‘ನಮೋ’ ದಕ್ಷಿಣ ದಂಡಯಾತ್ರೆ: ಮಾ.15ರಿಂದ ಪ್ರಧಾನಿ ಪ್ರವಾಸ

Related Video