Turning Point: ಶಾಸ್ತ್ರೀಜಿ ಮರಣದ ಬಳಿಕ ಪಟ್ಟಕ್ಕಾಗಿ ಅಂತರ್ಯುದ್ಧ! ಇಂದಿರಾ ಪಟ್ಟಾಭಿಷೇಕದ ಹಿಂದಿನ ರೋಚಕ ರಹಸ್ಯ!
ಲಾಲ್ ಬಹದ್ದೂರ್ ಶಾಸ್ತ್ರಿ ನಿಧನದ ಬಳಿಕ ದೇಶದ ಪ್ರಧಾನ ಮಂತ್ರಿ ಯಾರಾಗಬೇಕು ಎನ್ನುವ ನಿಟ್ಟಿನಲ್ಲಿ ನಡೆದಿದ್ದು ಅಕ್ಷರಶಃ ಅಂತರ್ಯುದ್ಧ. ಇಂದಿರಾ ಪಟ್ಟಾಭಿಷೇಕದ ಹಿಂದಿನ ರೋಚಕ ರಹಸ್ಯ ಈ ಬಾರಿಯ ಟರ್ನಿಂಗ್ ಪಾಯಿಂಟ್‌ನಲ್ಲಿ.
ಬೆಂಗಳೂರು (ಏ.12): ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬೆನ್ನಲ್ಲಿಯೇ ಅಂದರೆ ಸಾವಿನ ಮನೆಯಲ್ಲಿಯೇ ರಾಜಕೂಯ ರಣತಂತ್ರ ಸಿದ್ಧವಾಗ್ತಿತ್ತು. ಇದು ಸ್ವತಂತ್ರ ಭಾರತಕ್ಕೆ ಮೂರನೇ ಪ್ರಧಾನಿ ಆಯ್ಕೆಯಾದ ಕಥೆ. ಪ್ರಧಾನಿ ಪಟ್ಟದ ಕನಸು ಕಂಡಿದ್ದ ಮೊರಾರ್ಜಿ ದೇಸಾಯಿಗೆ ನೆಹರು ಮಗಳು ಕಂಟಕವಾಗಿದ್ದಳು.
ಸೂತಕದ ಮನೆಯಲ್ಲಿ ನಡೆದ ರಣತಂತ್ರ, ದೇಶದ ರಾಜಕೀಯ ಚಿತ್ರಣವನ್ನೇ ಶಾಶ್ವತವಾಗಿ ಬದಲಾಯಿಸಿಬಿಟ್ಟಿತು. ಅಂದು ಸುಮ್ಮನಿದ್ದ ಇಂದಿರೆಯ ಮನದಲ್ಲಿ ಪ್ರಧಾನಿಯ ಕನಸನ್ನು ಬಿತ್ತಿದ್ಯಾರು ಅನ್ನೋದು ಗೊತ್ತಾ?
ದೇಶದ ಮೂರನೇ ಪ್ರಧಾನಿಯ ಎದುರಲ್ಲಿತ್ತು ಸವಾಲುಗಳ ಮೂರು ಶಿಖರ. ಆದರೆ, ಉಕ್ಕಿನ ಮಹಿಳೆಯ ನಿರ್ಧಾರದ ದೇಶದ ಭವಿಷ್ಯವನ್ನೇ ಬದಲಿಸಿತ್ತು. ಒಂದೆಡೆ ದೇಶದ ಭವಿಷ್ಯ ಬದಲಾವಣೆ ಮಾಡುವ ನಿರ್ಧಾರಗಳು ಆಗುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿತ್ತು.