ದೇಗುಲಗಳಲ್ಲಿ ಶರ್ಟ್ ಕಳಚುವ ಪದ್ಧತಿ ಕೈಬಿಡಲು ಕೇರಳ ಸರ್ಕಾರ ಚಿಂತನೆ

ದೇವಸ್ಥಾನಗಳಲ್ಲಿ ಇಂತಹ ಸಾಮಾಜಿಕ ಸುಧಾರಣೆ ಪರಿಗಣಿಸುತ್ತೇವೆ. ದೇಗುಲಗಳಲ್ಲಿ ಶರ್ಟ್ ಕಳಚುವ ಪದ್ಧತಿ ಕೈಬಿಡಲು ಚಿಂತನೆ ನಡೆದಿದೆ. ಈ ಸಂಬಂಧ ಕೇರಳದ ದೇವಸ್ವಂ ಆಡಳಿತ ಮಂಡಳಿ ಯೋಜನೆ ರೂಪಿಸುತ್ತಿದೆ. ಕೇರಳ ಸಿಎಂ ಪಿಣರಾಯಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ. ಇದು ಹಿಂದೂ ಧರ್ಮದ ಅಪಮಾನ ಎಂದ ಕೇರಳ ಬಿಜೆಪಿ ನಾಯಕರು ಕೆಂಡ ಕಾರಿದ್ದಾರೆ.  

First Published Jan 3, 2025, 11:54 AM IST | Last Updated Jan 3, 2025, 11:53 AM IST

ಬೆಂಗಳೂರು(ಜ.03): ದೇಗುಲ ಪ್ರವೇಶಕ್ಕೂ ಮುನ್ನ ಶರ್ಟ್‌ ತೆಗೆಸುವ ಪದ್ಧತಿಯನ್ನ ನಿಲ್ಲಿಸಬೇಕು. ದೇವಸ್ಥಾನಗಳಲ್ಲಿ ಶರ್ಟ್‌ ತೆಗೆಸುವ ಪದ್ಧತಿ ಅನಿಷ್ಟ ಎಂದು ಹೇಳುವ ಮೂಲಕ ಕೇರಳದ ಶಿವಗಿರಿ ಮಠದ ಶ್ರೀಗಳು ವಿವಾದದ ಕಿಡಿ ಹೊತ್ತಿಸಿದ್ದಾರೆ. ಶಿವಗಿರಿ ಮಠದ ಶ್ರೀಗಳ ಮಾತಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. 

ದೀಪಾವಳಿಗೆ ಪಟಾಕಿ ಹೊಡೆದವ್ರು ಮೂರ್ಖರು, ಸೋನಾಕ್ಷಿ ವಿದೇಶದಲ್ಲಿ ಮಾಡಿದ್ದೇನು?