ದೀಪಾವಳಿಗೆ ಪಟಾಕಿ ಹೊಡೆದವ್ರು ಮೂರ್ಖರು, ಸೋನಾಕ್ಷಿ ವಿದೇಶದಲ್ಲಿ ಮಾಡಿದ್ದೇನು?
ದೀಪಾವಳಿಗಾದ್ರೆ ಮಾಲಿನ್ಯ.. ಹೊಸ ವರ್ಷಕ್ಕೆ ಪಟಾಕಿ ಹೊಡೆದ್ರೆ ಮಾಲಿನ್ಯ ಆಗಲ್ವಾ ಅಂತ ಜನ ಸೋನಾಕ್ಷಿಗೆ ಪ್ರಶ್ನೆ ಕೇಳ್ತಾ ಇದ್ದಾರೆ. ಅಂದಿನ ಮತ್ತು ಇಂದಿನ ಸ್ಟೇಟಸ್ನ ಜೊತೆಗೆ ಹಾಕಿ ಸೋನಾಕ್ಷಿ ಮತ್ತವಳ ಗಂಡನನ್ನ ಟ್ರೋಲ್ ಮಾಡಲಾಗ್ತಾ ಇದೆ...
ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾಗೆ (Sonakshi Sinha) ಸೋಷಿಯಲ್ ಮಿಡಿಯಾದಲ್ಲಿ ಎಲ್ಲರೂ ತಪರಾಕಿ ಹಾಕ್ತಾ ಇದ್ದಾರೆ. ಫ್ಯಾನ್ಸ್ ಕೇಳ್ತಿರೋ ಪ್ರಶ್ನೆಗಳ ಮುಂದೆ ಕಕ್ಕಾಬಿಕ್ಕಿಯಾಗಿರೋ ಸೋನಾಕ್ಷಿ ಕಾಮೆಂಟ್ ಬಾಕ್ಸ್ ಅನ್ನೇ ಆಫ್ ಮಾಡಿಕೊಂಡು ಸೈಲೆಂಟ್ ಮೋಡ್ಗೆ ಹೋಗಿದ್ದಾಳೆ. ಅಷ್ಟಕ್ಕೂ ಏನಿದು ಸೋನಾಕ್ಷಿಯ ಪಟಾಕ್ಷಿ ವಿವಾದ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಹೌದು, ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಪಾಲ್ ಜೊತೆಗೆ ಆಸ್ಟ್ರೇಲಿಯಾದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿಕೊಂಡಿದ್ದಾಳೆ. ನವವಿವಾಹಿತ ಜೋಡಿ ಹೊಸ ವರ್ಷದ ಸಂಭ್ರಮಾಚರಣೆಯನ್ನ ಖುಷಿ ಖುಷಿಯಾಗಿ ಆಚರಿಸಿ ಎಂಜಾಯ್ ಮಾಡಿದ್ದಾರೆ. ಆ ಸೆಲೆಬ್ರೇಷನ್ ಫೋಟೋಸ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಆದ್ರೆ ಈ ಫೋಟೋಸ್ ಹಾಕಿದ್ದೇ ಹಾಕಿದ್ದು, ಸೋನಾಕ್ಷಿಯ ನೆಮ್ಮದಿಯೇ ಹಾಳಾಗಿ ಹೋಗಿದೆ. ಈ ಫೋಟೋಸ್ ನೋಡಿದ ನೆಟ್ಟಿಗರು ಸೋನಾಕ್ಷಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಳೆದ ಸಾರಿ ದೀಪಾವಳಿ ಹೊತ್ತಲ್ಲಿ ಪಟಾಕಿ ಹೊಡೆಯೋ ಫೋಟೋ ಶೇರ್ ಮಾಡಿ ಇದ್ರಿಂದ ಮಾಲಿನ್ಯ ಆಗುತ್ತೆ. ಪಟಾಕಿ ಹೊಡೆಯುವವರಿಗೆ ಬುದ್ದಿ ಇಲ್ವಾ ಅಂತ ಸೋನಾಕ್ಷಿ ಸ್ಟೇಟಸ್ ಹಾಕಿದ್ಳು. ಆದ್ರೆ ಈಗ ನೋಡಿದ್ರೆ ಹೊಸ ವರ್ಷಕ್ಕೆ ಪಟಾಕಿ ಸಿಡಿಸೋ ವಿಡಿಯೋ ಶೇರ್ ಮಾಡಿ ಮಜಾ ಮಾಡಿಕೊಂಡು ಫೋಟೋಸ್ ಹಾಕಿದ್ದಾರೆ.
ದೀಪಾವಳಿಗಾದ್ರೆ ಮಾಲಿನ್ಯ.. ಹೊಸ ವರ್ಷಕ್ಕೆ ಪಟಾಕಿ ಹೊಡೆದ್ರೆ ಮಾಲಿನ್ಯ ಆಗಲ್ವಾ ಅಂತ ಜನ ಸೋನಾಕ್ಷಿಗೆ ಪ್ರಶ್ನೆ ಕೇಳ್ತಾ ಇದ್ದಾರೆ. ಅಂದಿನ ಮತ್ತು ಇಂದಿನ ಸ್ಟೇಟಸ್ನ ಜೊತೆಗೆ ಹಾಕಿ ಸೋನಾಕ್ಷಿ ಮತ್ತವಳ ಗಂಡನನ್ನ ಟ್ರೋಲ್ ಮಾಡಲಾಗ್ತಾ ಇದೆ.
ಅಸಲಿಗೆ ಸೋನಾಕ್ಷಿ ತಂದೆ ಶತ್ರುಘ್ನ ಸಿಹ್ನಾ ಅಪ್ಪಟ ರಾಮಭಕ್ತ. ಇವರ ಮನೆಮಂದಿಗೆಲ್ಲಾ ರಾಮಯಣದ ಹೆಸರುಗಳನ್ನ ಇಟ್ಟಿದ್ದಾರೆ. ಆದ್ರೆ ಸೋನಾಕ್ಷಿ ವರಿಸಿದ್ದು ಮುಸ್ಲಿಂ ಯುವಕನನ್ನ. ಅದನ್ನೂ ಎಳೆದು ತಂದು ಈಗ ಸೋನಾಕ್ಷಿಯನ್ನ ಟ್ರೋಲ್ ಮಾಡಲಾಗ್ತಾ ಇದೆ.
ಹಿಂದೂ ಹಬ್ಬಗಳಿಗೆ ಪಾಠ ಹೇಳುವ ನಿಮಗೆ ಈ ಟೈಂನಲ್ಲಿ ಆ ಪಾಠ ನೆನಪಾಗಲ್ವಾ..? ಇದು ಡಬಲ್ ಸ್ಟಾಂಡರ್ಡ್ ಅಲ್ವಾ ಅಂತ ಜನ ಪ್ರಶ್ನೆ ಕೇಳ್ತಾ ಇದ್ದಾರೆ. ಜನರ ಪ್ರಶ್ನೆಗಳ ಬಾಣ ಎದುರಿಸದೇ ಸೋನಾಕ್ಷಿ ಮತ್ತವಳ ಪತಿ ಕಾಮೆಂಟ್ಸ್ ಬಾಕ್ಸ್ ಆಫ್ ಮಾಡಿಕೊಂಡಿದ್ದಾರೆ. ಪಟಾಕಿ ಹೊಡೆಯೋಕೆ ಹೋಗಿ ತಪರಾಕಿ ಬೀಳ್ತಲ್ಲಪ್ಪಾ ಅಂತ ಗೋಳಾಡ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...