News Hour: ದುಡ್ಡಿಲ್ಲದೆ ದೇವರ ನಾಡು ಕೇರಳ ದಿವಾಳಿ, ಸುಪ್ರೀಂ ಕೋರ್ಟ್‌ ಛೀಮಾರಿ!

ದೇವರ ಸ್ವಂತ ನಾಡು, ಬುದ್ದಿವಂಥರ ಬೀಡು ಎನ್ನಲಾಗುತ್ತಿದ್ದ ಕೇರಳ ತನ್ನ ಹಣಕಾಸು ನಿವರ್ಹಣೆಯಲ್ಲಿ ಮಾಡಿದ ಪ್ರಮಾದದಿಂದ ದಿವಾಳಿಯಾಗುವ ಸನಿಹ ಬಂದಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಕೇರಳ ರಾಜ್ಯಕ್ಕೆ ಛೀಮಾರಿ ಹಾಕಲಾಗಿದೆ.
 

First Published Apr 3, 2024, 10:46 PM IST | Last Updated Apr 3, 2024, 10:46 PM IST

ಬೆಂಗಳೂರು (ಏ.3): ನೆರೆಯ ಕೇರಳ ರಾಜ್ಯ ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ಇದರ ಬೆನ್ನಲ್ಲಿಯೇ ಕೇರಳ ಸರ್ಕಾರಕ್ಕೆ ಸಾಲ ಪಡೆಯಲು ಕೇಂದ್ರ ಮಿತಿ ಹೇರಿದೆ. ಕೇಂದ್ರ ಸರ್ಕಾರದ ಮಿತಿ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಲಾಗಿದೆ.

ಅಶಿಸ್ತೇ ಇಂದಿನ ಕೇರಳ ಆರ್ಥಿಕ ದುಸ್ಥಿತಿಗೇ ಕಾರಣ. ಸಾಲಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಸಾಲಕ್ಕೆ ಕಾರಣವಾಗಲಿದೆ  ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸಾಲದ ಮಿತಿ ನಿರ್ಬಂಧ ತೆರವಿಗೆ ಕೇರಳ ಅರ್ಜಿ ಸಲ್ಲಿಕೆ ಮಾಡಿತ್ತು. ಆರ್ಥಿಕ ಸಂಕಷ್ಟ ತಗ್ಗಿಸಲು ಕೇಂದ್ರದಿಂದ ಪರಿಹಾರ ಕೊಡಿಸಲು ಅರ್ಜಿ ಹಾಕಲಾಗಿತ್ತು. ಆದರೆ ಕೇರಳ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ಸಿಎಎ ಅನುಷ್ಠಾನಕ್ಕೆ ಪಾಕ್‌ ನಿರಾಶ್ರಿತ ಹಿಂದೂಗಳು ಹರ್ಷ: ಕೇರಳದಲ್ಲಿ ಜಾರಿ ಮಾಡಲ್ಲ ಎಂದ ಸಿಎಂ ಪಿಣರಾಯಿ

ಕೇಂದ್ರದಿಂದ ಮಧ್ಯಂತರ ಪರಿಹಾರ ಕೊಡಿಸಲು ಸುಪ್ರೀಂ ಸಾಧ್ಯವಿಲ್ಲ ಎಂದಿದೆ. ಅದಲ್ಲದೆ, ಕೇರಳ ಸರ್ಕಾರದ ಸಾಲ ಅರ್ಜಿ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿದೆ. ಸಂವಿಧಾನದ 293ನೇ ವಿಧಿ ಬಗ್ಗೆ ಪ್ರಸ್ತಾಪಿಸಿ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. 293ನೇ ವಿಧಿ - ರಾಜ್ಯಗಳು ಪಡೆಯುವ ಸಾಲ, ಕೇಂದ್ರದ ನಿರ್ಬಂಧದ ಬಗ್ಗೆ ಉಲ್ಲೇಖ ಮಾಡುತ್ತದೆ.