Hijab Row ಹಿಜಾಬ್ ಇಲ್ಲ, ಸಾಂಪ್ರದಾಯಿಕ ಡ್ರೆಸ್, ಪಾಕ್ ಸಂಸ್ಥಾಪಕ ಜಿನ್ನಾಜೊತೆ ಭಾರತ AIMSF ಚಿತ್ರ ಬಿಚ್ಚಿಟ್ಟ ರಹಸ್ಯ!
- ಬುರ್ಖಾ, ಹಿಜಾಬ್ ಭಾರತದ ಮುಸ್ಲಿಂ ಮಹಿಳೆಯರ ವಸ್ತ್ರವಾಗಿರಲಿಲ್ಲ
- ಪಾಕ್ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಜೊತೆಗಿನ ಫೋಟೋ
- ಅಖಿಲ ಭಾರತ ಮುಸ್ಲಿಂ ವಿದ್ಯಾರ್ಥಿ ಒಕ್ಕೂಟದ ಫೋಟೋ ಹೇಳಿದ ಸತ್ಯ
- ಭಾರತದಲ್ಲಿ ಹಿಜಾಬ್ ವಿವಾದದ ಬೆನ್ನಲ್ಲೇ ಡಾನ್ ವರದಿ ವೈರಲ್
ಬೆಂಗಳೂರು(ಫೆ.15): ಕರ್ನಾಟದ ಉಡುಪಿ(Udupi) ಜಿಲ್ಲೆಯಿಂದ ಆರಂಭಗೊಂಡ ಹಿಜಾಬ್ ವಿವಾದ(Hijab Row) ಇದೀಗ ದೇಶಾದ್ಯಂತ ಕಿಡಿ ಹೊತ್ತಿಸಿದೆ. ಒಂದೆಡೆ ಹೈಕೋರ್ಟ್‌ನಲ್ಲಿ(Karnataka High Court) ವಿಚಾರಣೆ ನಡೆಯುತ್ತಿದೆ. ಮತ್ತೊಂದೆಡೆ ಮಧ್ಯಂತರ ಆದೇಶ ಧಿಕ್ಕರಿಸಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸುತ್ತಿದ್ದಾರೆ. ಆದರೆ ಭಾರತದ ಮುಸ್ಲಿಂ ಮಹಿಳೆಯರು(Muslims) ಎಂದೂ ಹಿಜಾಬ್, ಬುರ್ಖಾ ತೊಟ್ಟಿರಲಿಲ್ಲ. ಇವೆಲ್ಲೂ ಇತ್ತೀಚೆಗೆ ಆಚರಣೆಗೆ ಬಂದ ಪದ್ದತಿಗಳು ಅನ್ನೋದು ಸಾಬೀತಾಗಿದೆ. ಪಾಕಿಸ್ತಾನದ ಜನಪ್ರಿಯ ಡಾನ್ ಪತ್ರಿಕೆ ಪ್ರಕಟಿಸಿದ ಈ ಚಿತ್ರವನ್ನು ಪೋಸ್ಟ್ ಮಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್ ಭಾರತದ ಮುಸ್ಲಿಂರ ಸಾಂಪ್ರಾದಾಯಿಕ ಉಡುಗೆ ಕುರಿತು ಬೆಳಕು ಚೆಲ್ಲಿದ್ದಾರೆ.
ಪಾಕಿಸ್ತಾನ(Pakistan) ವಿಭಜಿಸಲು 1937ರಲ್ಲಿ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟದ(AIMSF) ಜೊತೆ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ(Muhammad Ali Jinnah) ಜಿನ್ನ ತೆಗೆದಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿರುವುದು AIMSF ವಿದ್ಯಾರ್ಥಿಗಳು. ಇಲ್ಲಿನ ಮುಸ್ಲಿಂ ವಿದ್ಯಾರ್ಥಿಗಳು ಯಾವುದೇ ಹಿಜಾಬ್ ಧರಿಸಿಲ್ಲ, ಬುರ್ಖಾ ಧರಿಸಿಲ್ಲ. ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿದ್ದಾರೆ. ಈ ಚಿತ್ರವನ್ನು ಪಾಕಿಸ್ತಾನದ ಡಾನ್ ಮಾಧ್ಯಮ 2014ರಲ್ಲಿ ವಿಶೇಷ ಲೇಖನದಲ್ಲಿ ಪ್ರಕಟಿಸಿದೆ. ಇದೀಗ ಇದೇ ಚಿತ್ರವನ್ನು ರಾಜೀವ್ ಚಂದ್ರಶೇಖರ್ ಟ್ವಿಟರ್ ಮೂಲಕ ಪೋಸ್ಟ್ ಮಾಡಿದ್ದಾರೆ.
MEA reacts to OIC : "ನಿಮ್ಮ ಗೌರವವನ್ನು ನೀವೇ ಹಾಳುಮಾಡಿಕೊಳ್ತಿದ್ದೀರಿ", ಹಿಜಾಬ್ ವಿಚಾರದಲ್ಲಿ ಭಾರತದ ಎಚ್ಚರಿಕೆ
ಇಸ್ಲಾಂ ಆಧಾರದಲ್ಲಿ ಪಾಕಿಸ್ತಾನ ರಚಿಸಲು ಭಾರತ ವಿಭಜಿಸಿದ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಹಾಗೂ ಮುಸ್ಲಿಂ ವಿದ್ಯಾರ್ಥಿ ಒಕ್ಕೂಟದ ಹಿನ್ನೋಟ. ಪಾಕಿಸ್ತಾನದ ಡಾನ್ ಮಾಧ್ಯಮ ಪ್ರಕಟಿಸಿದ ಈ ಚಿತ್ರ ಭಾರತೀಯ ಮುಸ್ಲಿಂಮರ ಉಡುಗೆಯನ್ನು ಖಚಿತಪಡಿಸುತ್ತಿದೆ. ಎಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ಧರ್ಮದ ಆಧಾರದಲ್ಲಿ ಭಾರತ ವಿಭಿಜಿಸಲು ಮೊಹಮ್ಮದ್ ಆಲಿ ಜಿನ್ನಾ ಟೊಂಕ ಕಟ್ಟಿ ನಿಂತಿದ್ದರು. ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಅವಿರತ ಶ್ರಮ ಆರಂಭಿಸಿತ್ತು. ಇದಕ್ಕೆ ಭಾರತ ಕಾಂಗ್ರೆಸ್ ಪಕ್ಷ ನೇರವಾಗಿ ಬೆಂಬಲ ನೀಡಿತ್ತು ಅನ್ನೋದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯ. ಇದೇ ವಿಚಾರವನ್ನು ಡಾನ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಭಾರತ ವಿಭಿಜಸು ಜಿನ್ನನಾಗೆ ಭಾರತದಿಂದಲೇ ಮುಸ್ಲಿಂ ಒಕ್ಕೂಟಗಳ ಬೆಂಬಲ ಅಗತ್ಯವಿತ್ತು. ಹೀಗಾಗಿ ಮುಸ್ಲಿಂ ಲೀಗ್ 1937ರಲ್ಲಿ ಅಖಿಲ ಭಾರತ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟ(AIMSF) ಆರಂಭಿಸಲಾಯಿತು. ಉತ್ತರ ಭಾರತದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಮುಸ್ಲಿಂ ವಿದ್ಯಾರ್ಥಿಗಳನ್ನು AIMSF ಸೇರಿಸಲಾಯಿತು. ಇದು ಜಿನ್ನ ಪಾಕಿಸ್ತಾನ ಚಳುವಳಿಗೆ ಮತ್ತಷ್ಟು ವೇಗ ನೀಡಿತು. ಇಲ್ಲಿ ಪ್ರಶ್ನೆ ಇದಲ್ಲ. ಭಾರತದಲ್ಲಿ ಮುಸ್ಲಿಂರ ಉಡುಗೆ.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಭಾರತದಲ್ಲಿ ಹಿಜಾಬ್ ಹಾಗೂ ಬುರ್ಖಾ ಭಾರತದ ಮುಸ್ಲಿಂರ ಉಡುಪಾಗಿರಲಿಲ್ಲ. ಇವೆಲ್ಲವೂ ಇತ್ತೀಚೆಗೆ ಆಚರಣೆಗೆ ಬಂದ ಪದ್ಧತಿಗಳಾಗಿವೆ. ಮೂಲಭೂತವಾದಿಗಳಿಂದ ಭಾರತದಲ್ಲಿ ಇಸ್ಲಾಂ ಧರ್ಮವನ್ನು ಕ್ಷಿಪ್ರಗತಿಯಲ್ಲಿ ಗಟ್ಟಿಗೊಳಿಸುವ ಹಲವು ಪ್ರಯತ್ನಗಳು ನಡೆದಿದೆ. ನಿಧಾನವಾಗಿ ಬುರ್ಖಾ, ಹಿಜಾಬ್ ಸೇರಿಕೊಂಡಿತು.
Shivamogga: ಎಕ್ಸಾಂಗೆ ಕೂರಿಸದಿದ್ರೂ ಪರ್ವಾಗಿಲ್ಲ, ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರ ಪಟ್ಟು
ಆದರೆ ಈ ಹಿಜಾಬ್ ಹಾಗೂ ಬುರ್ಖಾ ರಾಷ್ಟ್ರೀಯ ಸಮಸ್ಯೆಯಾಗಿ ತಲೆದೋರಿದ್ದು ಇದೇ ಮೊದಲು. ಇಲ್ಲಿ ಬುರ್ಖಾ ಹಾಗೂ ಹಿಜಾಬ್ ಧರಿಸುವುದು ಪ್ರಶ್ನೆಯಲ್ಲಿ. ಶಾಲಾ ಕಾಲೇಜಿನ ತರಗತಿಯೊಳಗೆ ಹಿಜಾಬ್ ಧರಿಸುವುದು ವಿವಾದಕ್ಕೆ ಕಾರಣವಾಗಿದೆ. ಬುರ್ಖಾ ಹಾಗೂ ಹಿಜಾಬ್‌ಗೆ ಶತ ಶತಮಾನಗಳ ಇತಿಹಾಸವಿದೆ. ಆದರೆ ಭಾರತದಲ್ಲಿ ಬುರ್ಖಾ ಹಾಗೂ ಹಿಜಾಬ್ ಇತಿಹಾಸ ದಶಕಗಳು ಮಾತ್ರ. ಇದೇ ಕಾರಣಕ್ಕೆ ಜಿನ್ನಾ ಜೊತೆಗಿನ ಅಖಿಲ ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟ ಫೋಟೋ ಭಾರಿ ವೈರಲ್ ಆಗಿದೆ