Annamalai: ಅಣ್ಣಾಮಲೈ ಮೋಡಿಗೆ ಒಲಿಯುತ್ತಾ ಗೆಲುವು? ಕನ್ನಡದ ಸಿಂಗಂ ಮೇಲೆ ಮೋದಿಗೆಷ್ಟು ನಂಬಿಕೆ..?

ಕೇಸರಿ ಪಡೆಯ ಪಾಲಾಗುತ್ತಾ ಮತ್ತೊಂದು ದಕ್ಷಿಣ ರಾಜ್ಯ..?
ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗುತ್ತಾ ತಮಿಳುನಾಡು..?
ಯಾತ್ರೆ ಬಳಿಕ ಬದಲಾಗಲಿದೆಯಾ ತಮಿಳುನಾಡು ಚಿತ್ರಣ..?

Share this Video
  • FB
  • Linkdin
  • Whatsapp

ದೇಶದಲ್ಲಿರೋದು ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು. ಒಂದು ಕಾಂಗ್ರೆಸ್(Congress) ಮತ್ತೊಂದು ಬಿಜೆಪಿ(BJP). ಈ ಎರಡೂ ಪಕ್ಷಗಳಿಗೂ ಭದ್ರವಾದ ನೆಲೆ ಅಂತ ಇರೋದು, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಾತ್ರ. ದಕ್ಷಿಣ ಭಾರತದಲ್ಲಿ, ಕರ್ನಾಟಕ ಒಂದೊಳಿದು ಮತ್ತೆಲ್ಲೂ ಕಾಂಗ್ರೆಸ್ ಅಥವಾ ಬಿಜೆಪಿಗೆ ಭದ್ರವಾದ ಕೋಟೆ ಅಂತ ಇಲ್ಲ. ಅದರಲ್ಲೂ, ಕಾಂಗ್ರೆಸ್ ತೆಲಂಗಾಣದಲ್ಲಿ ಸರ್ಕಾರ ರಚಿಸಿದೆ. ಕರ್ನಾಟಕದಲ್ಲಿ ಆಳ್ವಿಕೆ ಮಾಡ್ತಾ ಇದೆ. ಬಟ್ ಬಿಜೆಪಿಗೆ ಕರ್ನಾಟಕ ಒಂದುಳಿದು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಇಲ್ಲೆಲ್ಲೂ ಸುಭದ್ರವಾದ ಕೋಟೆ ಕಟ್ಟಿಕೊಳ್ಳೋದಕ್ಕೆ ಸಾಧ್ಯವೇ ಆಗಿಲ್ಲ. ತಮಿಳುನಾಡಿನ(Tamilnadu) ದುರಂತ ಅಂದ್ರೆ, 2016ರಲ್ಲಿ ಜಯಲಲಿತಾ ಅವರು ಅಸುನೀಗಿದ್ರು. ಆ ಗಾಯವಿನ್ನೂ ಹಸಿಯಾಗಿದ್ದಾಗಲೇ, ಎರಡೇ ವರ್ಷಕ್ಕೆ, ಕರುಣಾನಿಧಿ ಅವರೂ ವಿಧಿವಶರಾದ್ರು. ಆದ್ರೆ, ಈ ಇಬ್ಬರ ಆರ್ಭಟ ಹೇಗಿತ್ತು ಅಂದ್ರೆ, ಜನಕ್ಕೆ ಮುಖ್ಯಮಂತ್ರಿಯಗಿ ಈ ಇಬ್ಬರನ್ನಲ್ಲದೆ ಮತ್ಯಾರನ್ನ ಊಹಿಸಿಕೊಳ್ಳೋದೂ ಕಷ್ಟವಾಗಿತ್ತು. ಪರಿಸ್ಥಿತಿ ಹೋಗಿದ್ದಾಗಲೇ, ಆ ಕಡೆ ಜಯಲಲಿತಾ(J. Jayalalithaa) ಅವರಿದ್ದ ಆಲ್ ಇಂಡಿಯಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಹಾಗೂ ಕರುಣಾನಿಧಿಯವರ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಗಳ ಒಳಗೂ ಕಂಪನ ಉಂಟಾಗಿತ್ತು. ರಾಜಕೀಯದ ರಣರಂಗ ಶುರುವಾಯ್ತು.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಅತ್ತೆಯನ್ನ ಮುಗಿಸಿ ಸೆಲೆಬ್ರೇಷನ್‌ಗೆ ಗೋವಾಗೆ ಹೋದ..! ವಾರದ ನಂತರ ಸಿಕ್ಕಿತ್ತು ತಲೆ ಬುರುಡೆ..!

Related Video