ಮೋದಿ 3.0 ಸಂಚಕಾರದ ಸಂಚು!; ಪಾಕಿಸ್ತಾನದಲ್ಲಿ ಆಡಿದ ಆಟ ಭಾರತದಲ್ಲೂ ಆಡುತ್ತಾ ಅಮೆರಿಕಾ?

ಮೋದಿ 3.0 ಸರ್ಕಾರವನ್ನು ಉರುಳಿಸಲು ಅಮೆರಿಕದಲ್ಲಿಯೇ ವ್ಯೂಹ ಸಿದ್ಧವಾಗಿದೆಯಂತೆ. ಅಮೆರಿಕಾದ ಕೌನ್ಸಲ್ ಜನರಲ್ ಚಂದ್ರಬಾಬು ನಾಯ್ಡು ಅವರನ್ನ ಭೇಟಿಯಾಗಿದ್ದೇಕೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.21): ರಷ್ಯಾದ ಸರ್ಕಾರಿ ಮಾಧ್ಯಮ ಅತ್ಯಂತ ಭಯಾನಕ ವರದಿಉನ್ನು ನೀಡಿದೆ. ಮೋದಿ ಸರ್ಕಾರವನ್ನು ಉರುಳಿಸಲು ಅಮೆರಿಕದಲ್ಲಿ ದೊಡ್ಡ ವ್ಯೂಹ ರಚಿತವಾಗಿದೆಯಂತೆ. ಅಷ್ಟಕ್ಕೂ ದೊಡ್ಡ ಮಾಡುತ್ತಿರೋ ರಹಸ್ಯವೇನು ಗೊತ್ತಾ?

ರಾಷ್ಟ್ರ ರಾಜಕಾರಣದಲ್ಲಿ ರಷ್ಯಾದ ವರದಿ ತೂಫಾನ್‌ ಎಬ್ಬಿಸಿದೆ. ಮೋದಿ ಸರ್ಕಾರದ ವಿರುದ್ಧ ಅಮೆರಿಕಾದ ನಿಗೂಢ ವ್ಯೂಹ ರಚಿಸಿದ್ದಾಗಿ ವರದಿಯಾಗಿದೆ. ಮೋದಿ ಮತ್ತು ಮೈತ್ರಿ ಕೂಟಕ್ಕೆ ಸವಾಲು ಎದುರಾಗಿದೆಯಾ ಎನ್ನುವ ಅನುಮಾನವೂ ಕಾಡಿದೆ.

ದುಡಿಯಲು ಹೋದ 8 ಜನ ಯುವಕರು ರಷ್ಯಾದಲ್ಲಿ ಸಾವು: ಇದರ ಬಗ್ಗೆ ವಿಶ್ವಗುರು ಮೋದಿ ಉತ್ತರ ಕೊಡಬೇಕು: ಸಂತೋಷ್ ಲಾಡ್

ಪಾಕಿಸ್ತಾನದಲ್ಲಿ ಆಡಿದ ಆಟವನ್ನು ಅಮೆರಿಕ ಭಾರತದಲ್ಲೂ ಆಡುತ್ತಾ, ಬಾಂಗ್ಲಾದಲ್ಲಿ ಮಾಡಿದ್ದನೇ ಭಾರತದಲ್ಲೂ ಮಾಡುತ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಆಂಧ್ರದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರನ್ನೇ ಮುಂದಿಟ್ಕೊಂಡು, ಅಮೆರಿಕಾದ ನಾಯಕಿಯೊಬ್ಬರು ವಿಚಿತ್ರ ವ್ಯೂಹ ಹೆಣೆದಿದ್ದಾರೆ ಅನ್ನೋ ಮಾತಿದೆ.

Related Video