ದುಡಿಯಲು ಹೋದ 8 ಜನ ಯುವಕರು ರಷ್ಯಾದಲ್ಲಿ ಸಾವು: ಇದರ ಬಗ್ಗೆ ವಿಶ್ವಗುರು ಮೋದಿ ಉತ್ತರ ಕೊಡಬೇಕು: ಸಂತೋಷ್ ಲಾಡ್

ರಷ್ಯಾಗೆ ದುಡಿಯಲು ಹೋಗಿದ್ದ ಭಾರತೀಯರನ್ನ ಯುದ್ಧಕ್ಕೆ ಬಳಸಿಕೊಂಡಿದ್ದಾರೆ. ಅದರಲ್ಲಿ 8 ಜನ ಮೃತರಾಗಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ನೀಡಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದರು.

Karnataka minister santosh lad reacts about 8 Indians killed fighting for russia rav

ಧಾರವಾಡ (ಆ.15): ರಷ್ಯಾಗೆ ದುಡಿಯಲು ಹೋಗಿದ್ದ ಭಾರತೀಯರನ್ನ ಯುದ್ಧಕ್ಕೆ ಬಳಸಿಕೊಂಡಿದ್ದಾರೆ. ಅದರಲ್ಲಿ 8 ಜನ ಮೃತರಾಗಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ನೀಡಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದರು.

ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತಮ್ಮ ಭವಿಷ್ಯಕ್ಕಾಗಿ ಕೆಲಸಕ್ಕೆ ಹೋದ ಹುಡುಗರು ಅವರು. 70 ವರ್ಷದ ಇತಿಹಾಸದಲ್ಲಿ ಬಹಳ ಜನರು ವಿದೇಶಕ್ಕೆ ಹೋಗಿದ್ದಾರೆ ಆದರೆ ಮೋದಿ ಸಾಹೇಬರು ಬರುವ ಮುಂಚೆ ಯಾವತ್ತೂ ಹೀಗೆ ಯುದ್ಧಕ್ಕೆ ಬಳಸಿಕೊಂಡಿರಲಿಲ್ಲ. ಆದರೀಗ 67 ಜನ ರಷ್ಯಾಗೆ ಹೋದವರನ್ನ ಯುದ್ಧಕ್ಕೆ ಬಳಸಿದ್ದಾರೆ. ಅವರ ಪೈಕಿ ಎಂಟು ಜನರು ಮೃತರಾಗಿದ್ದಾರೆ.  ಇದಕ್ಕೆ ಯಾರು ಹೊಣೆ? ಈ ಘಟನೆ ದೇಶದ ದೊಡ್ಡ ಸುದ್ದಿಯಾಗಬೇಕಲ್ವ? ಅವರು ಯಾವುದೇ ಕೆಲಸಕ್ಕೆ ಹೋಗಿರಲಿ.  ಕೆಲಸ ಹುಡುಕಿ ವಲಸೆ ಬಂದವರನ್ನು ಮಿಲಿಟರಿಯಲ್ಲಿ ಬಳಸಬಹುದ? ಎಂದು ಪ್ರಶ್ನಿಸಿದರು.

ಮೊನ್ನೆ ಸಂಸತ್‌ನಲ್ಲಿ ವಿದೇಶಾಂಗ ಸಚಿವರು ಉತ್ತರ ಕೊಟ್ಟಿದ್ದಾರೆ. 'ಒಂದು ತಲೆಗೆ ಹತ್ತು ತಲೆ ತರುತ್ತೇವೆ' ಅಂತಾ ಪ್ರಧಾನಿ ಹೇಳ್ತಾರೆ ಆದರೆ ಇದರ ಬಗ್ಗೆ ಯಾಕೆ ಮಾತಾಡ್ತಿಲ್ಲ ಇನ್ನುವರೆಗೆ? ನಾವಿಂದು 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮೋದಿ ಹೇಳಿಕೆ ನೀಡಬೇಕು. ಯಾಕೆ ಅದರ ಬಗ್ಗೆ ಮಾತನಾಡಿಲ್ಲ? ಇವರು ಉಕ್ರೇನ್-ರಷ್ಯಾ ಯುದ್ಧವನ್ನೇ ನಿಲ್ಲಿಸಿದವರು. ಯುದ್ಧ ನಿಲ್ಲಿಸಿದ ವಿಶ್ವಗುರು ಮೋದಿ. ಹೀಗಾಗಿ ನಮ್ಮ ದೇಶದ ಯುವಕರ ಬಗ್ಗೆ ಉತ್ತರ ಕೊಡಬೇಕು. ಈ ಹಿಂದೆ ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ. ಮೋದಿ ಅವಧಿಯಲ್ಲಿ ಹೀಗೆ ಆಗಿದೆ. ಹಾಗಾದರೆ ರಷ್ಯಾದೊಂದಿಗಿನ ಎಲ್ಲ ವ್ಯವಹಾರ ನಿಲ್ಲಿಸುತ್ತೀರಾ? ಆಯಿಲ್ ಖರೀದಿ ನಿಲ್ಲಿಸ್ತೀರ? ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಇನ್ನು ಧಾರವಾಡ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರಗೆ ಬೆದರಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ತಮಟಗಾರಗೆ ಜೀವ ಬೆದರಿಕೆ ಬಂದಿದೆ. ನನಗೆ ಹುಷಾರಿರಲಿಲ್ಲ‌ ಹೀಗಾಗಿ ಭೇಟಿ ಮಾಡಿರಲಿಲ್ಲ. ಆದರೆ ಪೊಲೀಸ್ ಆಯುಕ್ತರ ಬಳಿ ಈ ಸಂಬಂಧ ಮಾತನಾಡಿದ್ದೇನೆ. ಆಯುಕ್ತರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಐವರ ಬಂಧಿಸಲಾಗಿದೆ. ಅವರ ವಿರುದ್ಧ ಕೇಸ್‌ಗಳನ್ನ ದಾಖಲು ಮಾಡಿದ್ದಾರೆ. ತನಿಖೆ ಮುಂದುವರಿದಿದೆ. ಯಾರೇ ಆಗಿರಲಿ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು..

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ: ಸಚಿವ ದಿನೇಶ್ ಗುಂಡೂರಾವ್ ಒತ್ತಾಯ

ಡ್ರಗ್ಸ್ ತೆಗೆದುಕೊಂಡವರಿಂದಲೇ ಬೆದರಿಕೆ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಧಾರವಾಡಕ್ಕೆ ಡ್ರಗ್ಸ್ ಬರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಮಗೆ ಬಂದಂತಹ ಮಾಹಿತಿ ಪ್ರಕಾರ ಧಾರವಾಡಕ್ಕೆ ಡ್ರಗ್ಸ್ ಆಂಧ್ರದಿಂದ ಬರುತ್ತಿದೆಯಂತೆ. ಡ್ರಗ್ಸ್ ವಿಚಾರದಲ್ಲಿ ಸಾರ್ವಜನಿಕರ ಮೇಲೂ ಜವಾಬ್ದಾರಿ ಇದೆ. ಜನಪ್ರತಿನಿಧಿಗಳಷ್ಟೇ ಜನರ ಮೇಲೂ ಜವಾಬ್ದಾರಿ ಇದೆ. ಈ ವಿಷಯದಲ್ಲಿ ಸಾರ್ವಜನಿಕರು ಜಾಗೃತರಾಗಬೇಕು. 32 ಸಾವಿರ ಕೋಟಿ ಮೌಲ್ಯದ ಅಫೀಮು ಅಫ್ಘಾನಿಸ್ತಾನದಿಂದ ದೇಶಕ್ಕೆ ಬರುತ್ತಿತ್ತು. ಎಲ್ಲ ಮಲ್ಟಿ ಸೆಕ್ಟರ್‌ನಿಂದ ಡ್ರಗ್ಸ್ ಬರುತ್ತಿದೆ. ಧಾರವಾಡ ಅಂತಲ್ಲ ಎಲ್ಲ ರಾಜ್ಯಗಳಿಯೂ ಡ್ರಗ್ಸ್ ಬರುತ್ತಿದೆ ಎಂದರು.

ಸರ್ಕಾರದ ಬಳಿ ಹಣವಿಲ್ಲದಿದ್ರೆ 12000 ಶಿಕ್ಷಕರ ನೇಮಕ ಸಾಧ್ಯವ? : ಮಧು ಬಂಗಾರಪ್ಪ

ಮೊನ್ನೆ ಧಾರವಾಡದಲ್ಲಿ ಅಧಿಕಾರಿಗಳು ದಿಢೀರ್ ದಾಳಿ ಮಾಡಿದರು. ದಾಳಿಯಲ್ಲಿ 500 ಜನರು ಸಿಕ್ಕಿದ್ದರು ಅವರನ್ನೆಲ್ಲ ತಪಾಸಣೆ ನಡೆಸಿದಾಗ 350 ಜನರ ರಿಪೋರ್ಟ್ ಪಾಸಿಟಿವ್ ಬಂತು. ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕರು ಸಹ ಪೊಲೀಸರಿಗೆ ಮಾಹಿತಿ ಕೊಡುವ ಕೆಲಸ ಮಾಡಬೇಕು ಎಂದರು.

Latest Videos
Follow Us:
Download App:
  • android
  • ios