ರಾಮಮಂದಿರ ಉದ್ಘಾಟನೆ ಆಹ್ವಾನದಲ್ಲೂ ಜಟಾಪಟಿ..! ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ಯಾ ಬಿಜೆಪಿ..?

ಕಾಂಗ್ರೆಸ್‌ನಿಂದ ಸೋನಿಯಾ, ಬಿಜೆಪಿಯಿಂದ ನಡ್ಡಾಗೆ ಆಹ್ವಾನ
ಮಾಜಿ ಪ್ರಧಾನಿ ಲೆಕ್ಕದಲ್ಲಿ ಮನಮೋಹನ್ ಸಿಂಗ್,ಎಚ್ಡಿಡಿಗೆ ಆಹ್ವಾನ
ಜೆಡಿಎಸ್ ಮುಖ್ಯಸ್ಥರ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿಗೆ ಆಹ್ವಾನ
 

Share this Video
  • FB
  • Linkdin
  • Whatsapp

ರಾಮಮಂದಿರ ಉದ್ಘಾಟನೆ ಆಹ್ವಾನದಲ್ಲೂ ಜಟಾಪಟಿ ಶುರುವಾಗಿದ್ದು, ಈ ವಿಚಾರದಲ್ಲಿ ಬಿಜೆಪಿ(BJP) ರಾಜಕೀಯ ಮಾಡ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಮತ್ತೊಂದು ಸುತ್ತಿನ ರಾಜಕೀಯ ಟಾಕ್ ವಾರ್‌ಗೆ ಕಾರಣವಾಗಿದೆ. ಕರ್ನಾಟಕದ(Karnataka) ಮಾಜಿ ಸಿಎಂಗೆ ರಾಮಮಂದಿರ(Ram Mandir) ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಆದ್ರೆ ಕರ್ನಾಟಕದ ಹಾಲಿ ಸಿಎಂ ಸಿದ್ದರಾಮಯ್ಯಗೆ(Siddaramaiah) ಆಹ್ವಾನವನ್ನು ಸಮಿತಿ ನೀಡಿಲ್ಲ. ಕುಮಾರಸ್ವಾಮಿಗೆ ಆಹ್ವಾನಿಸಿ, ಸಿದ್ದರಾಮಯ್ಯಗೆ ಆಹ್ವಾನಿಸಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ನನ್ನನ್ನ ರಾಮಮಂದಿರ ಉದ್ಘಾಟನೆಗೆ ಕರೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಿಮ್ಮನ್ನಲ್ಲ ಬಿಜೆಪಿ ಸಿಎಂಗಳನ್ನೇ ಕರೆದಿಲ್ಲ ಎಂದ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ತುಷ್ಠೀಕರಣದ ರಾಜಕಾರಣ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: ಪ್ರೀತಿಯಲ್ಲಿ ಬಿದ್ದ ಶಾರುಖ್ ಖಾನ್‌ ಮಗಳು: ಬಚ್ಚನ್ ಮೊಮ್ಮಗನ ಜೊತೆ ಸುಹಾನ ಡೇಟಿಂಗ್ !

Related Video