ಪ್ರವಾಸಕ್ಕೆ ಹೋಗಿದ್ದ 7 ಇಸ್ರೇಲಿಗಳ ಕಗ್ಗೊಲೆ: ಚೀನಾದಲ್ಲಿ ಇಸ್ರೇಲ್ ರಾಯಭಾರ ಉದ್ಯೋಗಿಗೆ ಇರಿತ..!

ಇಸ್ರೇಲ್ ಶಕ್ತಿಯನ್ನ ಕಡೆಗಣಿಸ್ತಾ ಇದ್ಯಾ ಹಮಾಸ್ ?
ಯುದ್ಧ ಸಾರಿದ ಮೇಲೆ ಇನ್ನೊಂದು ಹಂತದ ಕಿರಿಕ್
ಯಹೂದಿಗಳನ್ನ ಹುಡುಕಿ ಕೊಲ್ಲುತ್ತಿದೆ ರಕ್ಕಸ ಪಡೆ
ಈಜಿಪ್ಟ್‌ನಲ್ಲಿ 7 ಇಸ್ರೇಲಿ ಪ್ರವಾಸಿಗರ ಹತ್ಯಾಕಾಂಡ

Share this Video
  • FB
  • Linkdin
  • Whatsapp

ಇಸ್ರೇಲ್ ಹಾಗೂ ಹಮಾಸ್ ಸಂಘರ್ಷ ತಣ್ಣಗಾಗೋ ಯಾವ ಲಕ್ಷಣವೂ ಕಾಣಿಸ್ತಾ ಇಲ್ಲ. ಇಸ್ರೇಲ್(Israel) ಸೈನಿಕರ ಗೇಮ್ ಪ್ಲಾನ್ ನೋಡಿದ್ರೆ ಇನ್ನು ಕೆಲವೇ ದಿನಗಳಲ್ಲಿ ಹಮಾಸ್(Hamas) ಸಂಘಟನೆಯ ಗೋರಿ ಕಟ್ಟೋ ಥರ ಇದಾರೆ. ಆದ್ರೆ ಇನ್ನೊಂದು ಕಡೆಯಲ್ಲಿ ಎಲ್ಲಾ ಯಹೂದಿಗಳು(Jewish people) ನಮ್ಮ ಶತ್ರುಗಳು ಅಂತಲೇ ಅಂದ್ಕೊಂಡಿರೋ ಹಮಾಸ್ ಉಗ್ರರು ಇಸ್ರೇಲ್ ಒಳಗೆ ಮಾತ್ರವಲ್ಲ. ಬೇರೇ ಬೇರೆ ದೇಶಗಳಲ್ಲೂ ಕೂಡ ಯಹೂದಿಗಳನ್ನ ಟಾರ್ಗೆಟ್ ಮಾಡಿ ಹತ್ಯೆ ಮಾಡ್ತಾ ಇದಾರೆ. ಇಸ್ರೇಲ್ ಹಾಗೂ ಹಮಾಸ್ ಸಂಘರ್ಷ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣಿಸ್ತಾ ಇಲ್ಲ. ಹಮಾಸ್ ಉಗ್ರರು ಇಸ್ರೇಲ್ ಒತ್ತೆಯಾಳುಗಳನ್ನ ಬಿಡುಗಡೆ ಮಾಡೋದನ್ನೇ ಇಸ್ರೇಲ್ ಕಾಯ್ತಾ ಇದೆ. ಎಲ್ಲಾರೂ ಸೇಫ್ ಅಂತ ಅನಿಸಿದ ತಕ್ಷಣ ಹಿಂದೆಂದೂ ಕಂಡು ಕೇಳರಿಯದ ಮಹಾ ದಾಳಿಗೆ ಸಿದ್ದವಾಗಿ ನಿಂತಿದೆ. ಲೋಡೆಡ್ ಟ್ಯಾಂಕರ್ಗಳು ಪ್ಯಾಲಸ್ತೈನ್ ಅನ್ನೋ ನಗರಿಯನ್ನ ಸ್ಮಶಾಣ ಮಾಡೋಕೆ ಸರ್ವ ಸನ್ನದ್ಧವಾಗಿದೆ. ಇಸ್ರೇಲ್ ರಚ್ಚು ಅದೇ ಥರ. ಒಂದೇ ಒಂದು ಸಲ ಟಾರ್ಗೆಟ್ ಇಟ್ರೆ ಮುಗೀತು. ಎಂಥದ್ದೇ ಬಿಲದಲ್ಲಿ ಅಡಗಿದ್ದರೂ ಕೂಡ ಯಹೂದಿಗಳ ಮೈ ಮುಟ್ಟಿದವರನ್ನ ಸುಮ್ಮನೆ ಬಿಡೋದಿಲ್ಲಾ. ಹತ್ಯೆ ಮಾಡಿಯೇ ಸಿದ್ಧ ಅನ್ನುತ್ತೆ, ಅದೇ ಥರ ಇದೆ ಅವರ ಟ್ರಾಕ್ ರೆಕಾರ್ಡ್. ಇಸ್ರೇಲ್ ಕೆಣಕಿ ಉಳಿದವರಿಲ್ಲಾ ಅಂತ ಸುಮ್ಮನೇ ಜಗತ್ತು ಹೇಳೊದಿಲ್ಲ.

ಇದನ್ನೂ ವೀಕ್ಷಿಸಿ: ನಿಗಮ ಮಂಡಳಿ ನೇಮಕಕ್ಕೆ ಷರತ್ತು: 50-50 ಸೂತ್ರ ಅನುಸರಿಸಲು ಹೈಕಮಾಂಡ್ ಸೂಚನೆ

Related Video