
ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್
ಜಾಗತಿಕ ಸಂಘರ್ಷ ಮತ್ತು ಆರ್ಥಿಕ ಅಸ್ಥಿರತೆಯಿಂದಾಗಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಹೂಡಿಕೆದಾರರು ಡಾಲರ್ ಬದಲು ಬಂಗಾರವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ತನ್ನ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿದೆ ಇದು ಡಾಲರ್ ಪ್ರಾಬಲ್ಯಕ್ಕೆ ಸವಾಲೊಡ್ಡಿದೆ.
ನಮಸ್ತೆ ವೀಕ್ಷಕರೇ.. ಜಗತ್ತನ್ನ ಆಳೋ ಜನಕ್ಕೆ ಚಿನ್ನದ ಸಿಂಹಾಸನದ ಮೇಲೆ ಕೂರಬೇಕು ಅನ್ನೋ ಹಪಾಹಪಿ ಇರುತ್ತೆ.. ಆದ್ರೆ ಈಗ ಏನಾಗಿದೆ ಗೊತ್ತಾ? ಚಿನ್ನವೇ ಸಿಂಹಾಸನದ ಮೇಲೆ ಕೂತು, ಜಗತ್ತನ್ನ ಆಳೋಕೆ ಹೊರಟಂತಿದೆ.. ನೆಲದಾಳದಲ್ಲಿ ಸಿಗೋ ಬಂಗಾರ, ಈಗ ಅಂಬರವನ್ನೂ ಮೀರಿ, ಕೈಗೆಟುಕದಷ್ಟು ದೂರಕ್ಕೆ ಸರಿದು ಹೋಗಿದೆ.. ಬಡವರು ಬಂಗಾರ ಕಂಡುಕೊಳ್ಳೋದು, ಅಸಾಧ್ಯ ಅನ್ನೋ ಸ್ಥಿತಿ ನಿರ್ಮಾಣವಾಗಿದೆ.. ಯಾಕಂದ್ರೆ, ತನ್ನೆಲ್ಲಾ ಹಳೇ ರೆಕಾರ್ಡುಗಳೇ ಛಿದ್ರವಾಗೋ ಹಾಗೆ, ಹುಚ್ಚು ಕುದುರೆಯ ಹಾಗೆ, ಓಡೋಡಿ ಹೋಗ್ತಿದೆ ಬಂಗಾರ.. ಅದಕ್ಕೆ ಕಾರಣ ಏನು? ಪರಿಣಾಮ ಏನು? ನಮಗೂ ನಿಮಗೂ ಸಿಕ್ತಾ ಇರೋ ಎಚ್ಚರಿಕೆ ಏನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..