Asianet Suvarna News Asianet Suvarna News

International Yoga Day: ಯೋಗ ದಿನದಂದು ಮೋದಿ ವಿಡಿಯೋ ಸಂದೇಶ: ಇದರ ಅರ್ಥ ವಸುದೇವ ಕುಟುಂಬಕಂ ಎಂದ ನಮೋ

ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್‌ನಿಂದ ವಿಡಿಯೋ ಸಂದೇಶವನ್ನು ಭಾರತೀಯರಿಗೆ ಕಳುಹಿಸಿದ್ದಾರೆ. 
 

First Published Jun 21, 2023, 9:13 AM IST | Last Updated Jun 21, 2023, 9:13 AM IST

ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಯೋಗ ದಿನಾಚರಣೆ ಆಚರಿಸಲಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮೋದಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಿದ್ದಾರೆ. ಯೋಗ ದಿನ ಹಿನ್ನೆಲೆ ನ್ಯೂಯಾರ್ಕ್‌ನಿಂದ ಪ್ರಧಾನಿ ಮೋದಿ ವಿಶೇಷ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಅಲ್ಲದೇ ಇದೇ ವೇಳೆ ಎಲ್ಲಾ ಭಾರತೀಯರಿಗೂ ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗವು ಜಾಗತಿಕ ಆಂದೋಲನವಾಗಿದೆ ಎಂದು ಮೋದಿ ಹೇಳಿದರು.

ಇದನ್ನೂ ವೀಕ್ಷಿಸಿ: ಇಂದು ಯೋಗ ದಿನಾಚರಣೆ: ಇದರ ಹುಟ್ಟು, ಮಹತ್ವದ ಬಗ್ಗೆ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದೇನು?

Video Top Stories