
ನಾಕುಲಾ ಗಡಿಯಲ್ಲಿ ತಂಟೆ ತೆಗೆದ ಚೀನಾದ ಸೊಂಟ ಮುರಿದ ಭಾರತ.!
ಭಾರತೀಯ ಸೇನೆಯ ಶಕ್ತಿ ಸಾಮರ್ಥ್ಯವನ್ನು ಅರಿತರೂ ಚೀನಾ ತನ್ನ ಮೊಂಡಾಟ ಬಿಟ್ಟಿಲ್ಲ. ಆಗಾಗ ಭಾರತವನ್ನು ಕೆಣಕುವ ಕೆಲಸವನ್ನು ಮಾಡುತ್ತಿರುತ್ತದೆ. ಇದೀಗ ಸಿಕ್ಕಿಂ ಗಡಿಯೊಳಗೆ ಪ್ರವೇಶಕ್ಕೆ ಯತ್ನಿಸಿದ್ದು ಉಭಯ ದೇಶಗಳ ಯೋಧರ ನಡುವೆ ಮುಖಾಮುಖಿ ಸಂಘರ್ಷ ನಡೆದಿದೆ.
ನವದೆಹಲಿ (ಜ. 26): ಭಾರತೀಯ ಸೇನೆಯ ಶಕ್ತಿ ಸಾಮರ್ಥ್ಯವನ್ನು ಅರಿತರೂ ಚೀನಾ ತನ್ನ ಮೊಂಡಾಟ ಬಿಟ್ಟಿಲ್ಲ. ಆಗಾಗ ಭಾರತವನ್ನು ಕೆಣಕುವ ಕೆಲಸವನ್ನು ಮಾಡುತ್ತಿರುತ್ತದೆ. ಇದೀಗ ಸಿಕ್ಕಿಂ ಗಡಿಯೊಳಗೆ ಪ್ರವೇಶಕ್ಕೆ ಯತ್ನಿಸಿದ್ದು ಉಭಯ ದೇಶಗಳ ಯೋಧರ ನಡುವೆ ಮುಖಾಮುಖಿ ಸಂಘರ್ಷ ನಡೆದಿದೆ. ಚೀನಾದ 20 ಕ್ಕೂ ಹೆಚ್ಚು ಯೋಧರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ನಾಲ್ವರು ಭಾರತೀಯ ಯೋಧರಿಗೆ ಸಣ್ಣಪುಟ್ಟಗಾಯಗಳಾಗಿವೆ.
ರೈತರ ಟ್ರಾಕ್ಟರ್ ಕ್ರಾಂತಿ; ರಾಜಧಾನಿಯ ಪರಿಸ್ಥಿತಿ ಏನಾಗಲಿದೆ.?
‘ಜ.20ರಂದು ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿ ಚೀನಾ ಯೋಧರು ಭಾರತೀಯ ಗಡಿ ಪ್ರವೇಶಿಸುವ ಯತ್ನ ಮಾಡಿದರು. ಈ ವೇಳೆ ನಮ್ಮ ಯೋಧರು ಅವರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಸಣ್ಣ ಪ್ರಮಾಣದಲ್ಲಿ ಮುಖಾಮುಖಿ ಸಂಘರ್ಷ ನಡೆದಿದೆ. ಆದರೆ ಬಳಿಕ, ಸ್ಥಳೀಯವಾಗಿ ನಿಯೋಜಿತವಾಗಿರುವ ಉಭಯ ದೇಶಗಳ ಕಮಾಂಡರ್‌ಗಳು, ಬಳಕೆಯಲ್ಲಿರುವ ಶಿಷ್ಟಾಚಾರದ ಅನ್ವಯ ಮಾತುಕತೆ ನಡೆಸಿ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಿದ್ದಾರೆ’ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.