PM Modi In Meerut: ಮೀರತ್‌ಗೆ ಬಂದ ಮೋದಿಗೆ ಅದ್ಧೂರಿ ಸ್ವಾಗತ, ಬೀದಿ ಬೀದಿಯಲ್ಲೂ ಸೇರಿದ ಜನ!

ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಯ ಮೀರತ್‌ಗೆ ಭೇಟಿ ನೀಡಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮೀರತ್ ನಿವಾಸಿಗಳಲ್ಲಿ ಭಾರಿ ಉತ್ಸಾಹದಿಂದ ನೆರೆದಿದ್ದಾರೆ. ಮೀರತ್‌ನ ಬೀದಿಗಳಲ್ಲಿ ಪಿಎಂ ಮೋದಿ ಕಾರು ಹಾದು ಹೋದಾಗ, ರಸ್ತೆಯ ಎರಡೂ ಬದಿಗಳಲ್ಲಿ ಜನರು ಗುಂಪು ಸೇರಿದ್ದಾರೆ. ಇವೆಲ್ಲದರ ನಡುವೆ ಪ್ರಧಾನಿ ಮೋದಿ ತಮ್ಮ ಕಾರಿನೊಳಗಿಂದಲೇ ಜನರೆಡರೆ ಕೈ ಬೀಸಿದ್ದಾರೆ.
 

Share this Video
  • FB
  • Linkdin
  • Whatsapp

ಮೀರತ್(ಜ.02): ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಯ ಮೀರತ್‌ಗೆ ಭೇಟಿ ನೀಡಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮೀರತ್ ನಿವಾಸಿಗಳಲ್ಲಿ ಭಾರಿ ಉತ್ಸಾಹದಿಂದ ನೆರೆದಿದ್ದಾರೆ. ಮೀರತ್‌ನ ಬೀದಿಗಳಲ್ಲಿ ಪಿಎಂ ಮೋದಿ ಕಾರು ಹಾದು ಹೋದಾಗ, ರಸ್ತೆಯ ಎರಡೂ ಬದಿಗಳಲ್ಲಿ ಜನರು ಗುಂಪು ಸೇರಿದ್ದಾರೆ. ಇವೆಲ್ಲದರ ನಡುವೆ ಪ್ರಧಾನಿ ಮೋದಿ ತಮ್ಮ ಕಾರಿನೊಳಗಿಂದಲೇ ಜನರೆಡರೆ ಕೈ ಬೀಸಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ಹೋದ ತಕ್ಷಣ, ಮೀರತ್‌ನ ಬೀದಿಗಳಲ್ಲಿ ಜನರು ಅವರನ್ನು ನೋಡಲು ಜಮಾಯಿಸಿದರು. ಅಷ್ಟೇ ಅಲ್ಲದೇ, ಜನರು ಮನೆಯಿಂದ ಹೊರಬಂದು ಪ್ರಧಾನಿ ಮೋದಿಯನ್ನು ಬಾಗಿಲಲ್ಲಿ ನಿಂತು ಸ್ವಾಗತಿಸಿದ್ದಾರೆ. 

ಪ್ರಧಾನಿ ಮೋದಿಯವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಆಡಳಿತ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಪ್ರಧಾನಿ ಕಾರ್ಯಕ್ರಮದ ಬಗ್ಗೆ ವ್ಯವಸ್ಥೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮಾಹಿತಿ ಪ್ರಕಾರ ವಿವಿಧ ಜಿಲ್ಲೆಗಳಿಂದ ಸುಮಾರು 15 ಸಾವಿರ ಆಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೀರತ್ ಜಿಲ್ಲೆ ಮತ್ತು ಇತರ ಹತ್ತಿರದ ಜಿಲ್ಲೆಗಳಲ್ಲಿ ಎಲ್ಲರಿಗೂ ತಂಗಲು ವ್ಯವಸ್ಥೆ ಮಾಡಲಾಗಿದೆ.

Related Video