ಬಿಸಿಗಾಳಿ ದಂಡಯಾತ್ರೆ ಜೊತೆ ಪ್ರಳಯ ಮಳೆ ದಾಂಗುಡಿ..5 ರಾಜ್ಯಗಳ ಮೇಲೆ ವರುಣನ ರಣಘೋಷ..!

ಒಂದು ಕಡೆ ಬಿಸಿಗಾಳಿ ದಂಡಯಾತ್ರೆ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪ್ರಳಯ ಮಳೆ ದಾಂಗುಡಿ ಇಡುತ್ತಿದೆ. ಬರೋಬ್ಬರಿ 5 ರಾಜ್ಯಗಳ ಮೇಲೆ ವರುಣ ರಣಘೋಷ ಮೊಳಗಿಸಿದ್ದಾನೆ..ಈ ರಣಬೇಟೆ ಇನ್ನೆಷ್ಟು ಕಾಲ ಇರಲಿದೆ..? ಕರ್ನಾಟಕಕ್ಕೆ ಎದುರಾಗಿರೋ ಕಂಟಕ ಎಂಥದ್ದು..? ಈ ವಿಡಿಯೋ ನೋಡಿ
 

Share this Video
  • FB
  • Linkdin
  • Whatsapp

ಒಂದು ಕಡೆ ಬಿಸಿಗಾಳಿ ದಂಡಯಾತ್ರೆ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪ್ರಳಯ ಮಳೆ ದಾಂಗುಡಿ ಇಡುತ್ತಿದೆ. ಬರೋಬ್ಬರಿ 5 ರಾಜ್ಯಗಳ ಮೇಲೆ ವರುಣ ರಣಘೋಷ ಮೊಳಗಿಸಿದ್ದಾನೆ..ರಾಜಸ್ತಾನ, ಹರ್ಯಾಣ, ಪಂಜಾಬ್, ದೆಹಲಿ, ಚಂಡಿಘಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹೀಗೆ ಇಡೀ ಉತ್ತರ ಭಾರತವೇ ಬಿಸಿಲಿನ ಆಘಾತ ತಡೆಯಕ್ಕಾಗದೆ ತತ್ತರಿಸಿದೆ.. ರಣಬಿಸಿಲಿನ ಹೊಡೆತಕ್ಕೆ ಅಲ್ಲಿನ ಜನ ಹೊರಗಡೆ ಓಡಾಡೋದೂ ಕಷ್ಟವಾಗಿದೆ.. ಆದ್ರೆ ಈ ರಣಬಿಸಿಲು ಅನ್ನೋ ಸೂರ್ಯಶಾಪದ ಜೊತೆಯಲ್ಲೇ, ವರುಣಾಘಾತವೂ ವಕ್ಕರಿಸಿದೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪರಿಸ್ಥಿತಿ ತೀರಾ ವಿಚಿತ್ರವಾಗಿದೆ. ಮೊನ್ನೆ ತನಕ ಬಿಸಿಲಿನ ತಾಪಮಾನ ವಿಚಾರದಲ್ಲಿ ರೆಕಾರ್ಡ್ ಬರೆದಿದ್ದ ದೆಹಲಿಯಲ್ಲಿ ಈಗ ವರುಣನ ಆರ್ಭಟ ಶುರುವಾಗಿದೆ.. ಭಾರತೀಯ ಹವಾಮಾನ ಇಲಾಖೆ.. ಏನಿಲ್ಲಾ ಅಂದ್ರೂ, ಮುಂದಿನ ಜೂನ್ 5ರ ತನಕ ರಣಮಳೆಯ ಸಾಧ್ಯತೆ ಇದೆ ಅಂತ ಹೇಳಿದೆ.. ಈ ರಣಬೇಟೆ ಇನ್ನೆಷ್ಟು ಕಾಲ ಇರಲಿದೆ..? ಕರ್ನಾಟಕಕ್ಕೆ ಎದುರಾಗಿರೋ ಕಂಟಕ ಎಂಥದ್ದು..? ಈ ವಿಡಿಯೋ ನೋಡಿ 

Related Video