ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
ಕಣಿವೆ ನಾಡು ಜಮ್ಮುಕಾಶ್ಮೀರದ ಕಾಡುಗಳಲ್ಲಿ ಭಾರತೀಯ ಸೇನೆ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದೆ. ಭಯೋತ್ಪಾದಕರನ್ನು ಮಟ್ಟಹಾಕಲು ಸೇನೆ ಸನ್ನದ್ಧವಾಗಿದ್ದು, ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.
3 ದಿನದ ಹಿಂದೆ ಶಪಥ.. ಈಗದು ಸತ್ಯ!
ಸಾಲು ಸಾಲು ದಾಳಿ.. ನಿರಂತರ ಶಿಕಾರಿ.. ಉಗ್ರರಿಗೆ ಢವಢವ!
ಯಾವಾಗ ಉಗ್ರಮುಕ್ತವಾಗಲಿದೆ ಜಮ್ಮು ಮತ್ತು ಕಾಶ್ಮೀರ?
ಆಪರೇಷನ್ ಉಗ್ರಸಂಹಾರ ಶುರುವಾಗಿದ್ದು ಹೇಗೆ ಗೊತ್ತಾ?
ಅಡವಿಯಲ್ಲಿ ಅಡಗಿದ್ದಾರೆ ಭಯಬಿದ್ದ ಭಯೋತ್ಪಾದಕರು
ಅಮಾಯಕರನ್ನೇ ಗುರಾಣಿಯಂತೆ ಹಿಡಿದ ಉಗ್ರಪಾತಕಿಗಳು
3 ದಿನ ಕಳೆದರೂ ಮುಗಿದಿಲ್ಲವೇಕೆ ಉಗ್ರಸಂಹಾರ.. ಏನು ಸವಾಲು
ಕಣಿವೆ ನಾಡಲ್ಲಿ, ಉಗ್ರರ ನೆತ್ತರು ಹರಿಸೋದಕ್ಕೆ ಭಾರತದ ಸೇನೆ ಸನ್ನದ್ಧವಾಗಿದೆ.. ಕಳೆದೊಂದು ತಿಂಗಳಿಂದಲೂ ಹೆಣೆಯಲಾದ ವ್ಯೂಹ, ಈಗ ಫಲ ಕೊಡೋ ಲಕ್ಷಣಗಳು ಕಾಣ್ತಾ ಇದಾವೆ.. ಅಸಲಿಗೆ ಜಮ್ಮು ಕಾಶ್ಮೀರದಲ್ಲಿ ಆಗ್ತಾ ಇರೋದೇನು? ಒಂದೊಂದು ಹೆಣ ಉರುಳಿಬಿದ್ದಾಗಲೂ, ಪಾಕಿಸ್ತಾನ ಪರದಾಡ್ತಿರೋದು ಯಾಕೆ? ಅದೆಲ್ಲದರ ಇನ್ ಡೆಪ್ತ್ ಸ್ಟೋರಿ, ಇಲ್ಲಿದೆ ನೋಡಿ..
ಒಂದು ಕಡೆ, ಭಯೋತ್ಪಾದಕರನ್ನ ಹೊಸಕಿ ಹಾಕೋ ಭಾರತ, ಇನ್ನೊಂದು ಕಡೆ ಪಾಕಿಸ್ತಾನವನ್ನ ಡಿಪ್ಲಮೆಟಿಕ್ ಆಗಿ ಕಟ್ಟಿ ಹಾಕ್ತಾ ಇದ್ಯಲ್ಲಾ, ಹೇಗದು? ಭಾರತದ ನಿಗೂಢ ವ್ಯೂಹ ಪಾಕಿಗೆ ಹೇಗೆ ಶಾಪವಾಗಲಿದೆಯ? ಟೆರರಿಸಂ ವಿರುದ್ಧ ಜೀರೋ ಟಾಲೆರೆನ್ಸ್.. ಇದು ಪ್ರಧಾನಿ ಮೋದಿ ಸರ್ಕಾರದ ಮೊದಲ ಮಾತು.. ಆ ಮಾತಿಗೆ ಸಾಕ್ಷಿಯಾಗಿ ನಡೀತಾ ಇರೋದೇ, ಕಥುವಾ ಆಪರೇಷನ್.. ಈ ಮೂಲಕ, ಭಾರತ ಉಗ್ರರನ್ನ ಸದೆಬಡೆಯಬೇಕು ಅಂತಷ್ಟೇ ಕಾಯ್ತಾ ಇಲ್ಲ.. ಇಂಥಾ ಉಗ್ರಸರ್ಪಗಳ ಕಾರ್ಖಾನೆಯ ಬುಡಕ್ಕೇ ಬೆಂಕಿ ಹಚ್ಚೋಕೆ ನೋಡ್ತಾ ಇದೆ. ಹಾಗಾದ್ರೆ ಈ ಆಪರೇಷನ್ ಮುಗಿಯೋದು ಯಾವಾಗ? ಉಗ್ರರ ಸಮಾಧಿ ಕಟ್ಟೋದು ಯಾವಾಗ? ಈ ಉಗ್ರಬೇಟೆಗೆ ಸಿದ್ಧತೆ ನಡೆದಿದ್ದು ಹೇಗೆ ಇದೆಲ್ಲಾ ಡಿಟೇಲ್ ಈ ವೀಡಿಯೋದಲ್ಲಿದೆ ನೋಡಿ.