ಭಾರತ ಕೊಟ್ಟ ರಾಜತಾಂತ್ರಿಕ ಹೊಡೆತಕ್ಕೆ ತುತ್ತು ಅನ್ನಕ್ಕೂ ಪರದಾಡುತ್ತಿದೆ ಪಾಕಿಸ್ತಾನ

ದರಿದ್ರ ರಾಷ್ಟ್ರ ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಚರ್ಚಿಸಲಾಗಿದೆ. ಭಾರತದ ರಾಜತಾಂತ್ರಿಕ ಕ್ರಮಗಳು ಪಾಕಿಸ್ತಾನದ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದನ್ನು ವಿವರಿಸಲಾಗಿದೆ. ಸಿಂಧೂ ನದಿ ಒಪ್ಪಂದದ ನಂತರ ಭಾರತದ ಕ್ರಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ.

Share this Video
  • FB
  • Linkdin
  • Whatsapp

ದರಿದ್ರ ರಾಷ್ಟ್ರವಾದ್ರೂ ದೌಲತ್ತಿಗೇನು ಕಡಿಮೆಯಿಲ್ಲ. ತುತ್ತು ಅನ್ನಕ್ಕೂ ಹಾಹಾಕಾರವಿದ್ರೂ ಅಹಂಕಾರಕ್ಕೇನು ಕೊರತೆಯಿಲ್ಲ. ಸಾಯೋ ಸ್ಥಿತಿಯಲ್ಲಿಯೂ ತಾನು ಸೇಡು ಬಿಡಲ್ಲ ಅಂತಿದೆ ಪಾಕಿಸ್ತಾನ. ಸಾಲದ ಶೂಲ ಚುಚ್ಚುತ್ತಿದೆ. ಯುದ್ಧದ ಕೇಡುಗಾಲ ಶುರುವಾಗಿದೆ. ಇದು ಪಾಕಿಸ್ತಾನದ ವಿನಾಶಕಾಲವಾ? ಭಾರತ ಜಸ್ಟ್ ಬತ್ತಳಿಕೆಗೆ ಕೈ ಹಾಕಿದ್ದು ಅಷ್ಟೇ, ಭಿಕಾರಿ ದೇಶದ ಪರಿಸ್ಥಿತಿ ರಣಭೀಕರವಾಗಿದೆ. ಇನ್ನು, ರಣಕಹಳೆ ಮೊಳಗಿಸಿಯೇ ಬಿಟ್ರೆ ಸೈತಾನ ದೇಶದ ಕಥೆಯೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಜಿಯಾದಿ ದಾಯಾದಿ ಸಮಾಧಿ..

ಈ ಮಧ್ಯೆ ಪಾಕಿಸ್ತಾನದ ವಿರುದ್ಧ ಮತ್ತೊಂದು ರಾಜತಾಂತ್ರಿಕ ಅಸ್ತ್ರ ಬಿಟ್ಟಿದೆ ಭಾರತ.. ಆ ಅಸ್ತ್ರದ ಏಟಿಗೆ ಪಾಕಿಸ್ತಾನ ಪತರುಗುಟ್ಟಿದೆ. ಹಾಗಿದ್ರೇ ಯಾವುದು ಆ ಅಸ್ತ್ರ..? ಅದ್ರಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿರೋದು ಹೇಗೆ.. ಅಂತ ತೋರಿಸ್ತೀವಿ. ಪಾಕಿಸ್ತಾನದ ವಿರುದ್ಧ ಭಾರತ ಇನ್ನೂ ಕೂಡ ಯುದ್ಧ ಸಾರಿಲ್ಲ. ಆದ್ರೆ, ರಾಜತಾಂತ್ರಿಕವಾಗಿ ಒಂದಾದ ಮೇಲೆ ಒಂದು ಪೆಟ್ಟು ಕೊಡ್ತಿದೆ. ಸಿಂಧೂ ನದಿ ಜಲ ಒಪ್ಪಂದದ ನಂತ್ರ ಪಾಕ್​ ಮೇಲೆ ಮತ್ತೊಂದು ಗದೆಯನ್ನ ಬೀಸಿದೆ ಭಾರತ. ಅಷ್ಟಕ್ಕೂ ಪಾಕಿಸ್ತಾನ ಯಾಕೆ ಈ ಸ್ಥಿತಿಗೆ ಬಂದಿದೆ..? ಆರ್ಥಿಕವಾಗಿ ಪಾಕ್ ಪರಿಸ್ಥಿತಿ ಇಷ್ಟು ಹೀನ ಸ್ಥಿತಿಗೆ ಬಂದಿದ್ಯಾಕೆ.. ಅಂತ ತೋರಿಸ್ತೀವಿ.

ಪಾಕಿಸ್ತಾನ ಅನ್ನೋ ದೇಶ ರಚನೆಯಾದ ಕ್ಷಣದಿಂದಲೂ ಒಂದಲ್ಲಾ ಒಂದು ಮಹಾಪ್ರಮಾದವನ್ನು ಮಾಡುತ್ತಲೇ ಬಂದಿದೆ. ಅದೆಲ್ಲದರ ಪ್ರತಿಫಲದಿಂದಲೇ ಪಾಕ್​ ಈ ಪರಿಸ್ಥಿತಿಗೆ ಬಂದು ನಿಂತಿರೋದು. ಆರ್ಥಿಕವಾಗಿ ನೆಲಕಚ್ಚಿ ಹೋಗಿರೋದು.

Related Video