ಸಾವಿನ ಸಂಖ್ಯೆಯಲ್ಲಿ ಅಮೆರಿಕಾ ಹಿಂದಿಕ್ಕಿದ ಭಾರತ, ಒಂದೇ ದಿನ 4529 ಮಂದಿ ಸಾವು

- ಭಾರತದಲ್ಲಿ ಒಂದೇ ದಿನ 4529 ಮಂದಿ ಬಲಿ,

- ಅತಿ ಹೆಚ್ಚು ಸಾವಿನ ರಾಜ್ಯಗಳಲ್ಲಿ ಕರ್ನಾಟಕ ನಂ 2

- ದೈನಂದಿನ ಸೋಂಕು 2 ಲಕ್ಷಕ್ಕೆ ಇಳಿಕೆ 

First Published May 20, 2021, 11:51 AM IST | Last Updated May 20, 2021, 11:51 AM IST

ಬೆಂಗಳೂರು (ಮೇ. 20): ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರ ಕೊಂಚ ತಗ್ಗಿದೆ ಎಂದು ಸಮಾಧಾನಪಟ್ಟುಕೊಳ್ಳುವಾಗಲೇ, ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಬುಧವಾರ ಹೊಸ ದಾಖಲೆ ಬರೆದಿದೆ. ಒಂದೇ ದಿನ 4,529 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕಾದಲ್ಲಿ 2021 ರ ಏ. 12 ರಂದು ಒಂದೇ ದಿನ 4468 ಜನರು ಸಾವನ್ನಪ್ಪಿದ್ದು, ಈವರೆಗಿನ ದೈನಂದಿನ ಗರಿಷ್ಠ ದಾಖಲೆಯಾಗಿತ್ತು. ಇದೀಗ ಭಾರತ ಈ ದಾಖಲೆಯನ್ನು ಮುರಿದಿದೆ. 

ಸ್ವಂತ ಹಣದಿಂದ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ವೈದ್ಯ..!