
ನನ್ನಿಂದಲೇ ಕದನವಿರಾಮ ಎಂದ ಟ್ರಂಪ್ಗೆ ತಿರುಗೇಟು: 3ನೇ ರಾಷ್ಟ್ರದ ಅಗತ್ಯವಿಲ್ಲ ಎಂದ ಮೋದಿ
ನಾವು ಬುಲೆಟ್ಗೆ ಬುಲೆಟ್ನಿಂದಲೇ ಉತ್ತರಿಸಿದ್ದೇವೆ. 3ನೇ ರಾಷ್ಟ್ರದ ಮಧ್ಯಸ್ಥಿಕೆ ಬೇಕಿಲ್ಲ. ಭಾರತ-ಪಾಕ್ ಮಧ್ಯೆ 3ನೇ ರಾಷ್ಟ್ರದ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕಕಕ್ಕೆ ಆಗಮಿಸುವಂತೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿರಸ್ಕರಿಸಿದ್ದಾರೆ. ಬುಧವಾರ ನಡೆದ ಫೋನ್ ಚರ್ಚೆ ವೇಳೆ ‘ಜಿ7 ಶೃಂಗ ಮುಗಿದ ಬಳಿಕ ಕೆನಡಾದಿಂದ ಭಾರತಕ್ಕೆ ಮರಳುವಾಗ ಅಮೆರಿಕಕ್ಕೆ ಬಂದು ಹೋಗಿ’ ಎಂದು ಟ್ರಂಪ್ ಅವರು ಮೋದಿಗೆ ಆಹ್ವಾನ ನೀಡಿದರು.