ಒತ್ತೆಯಿಟ್ಟಿದ್ದ 10 ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದ ಚೀನಾ
ಓರ್ವ ಲೆಫ್ಟಿನೆಂಟ್ ಕರ್ನಲ್ ಹಾಗೂ ಮೂವರು ಮೇಜರ್ ಸೇರಿ 10 ಮಂದಿ ಭಾರತದ ಸೈನಿಕರನ್ನು ಚೀನಾ ಒತ್ತೆಯಿಟ್ಟುಕೊಂಡಿತ್ತು. ಗುರುವಾರ ಸಂಜೆ ನಡೆದ ಮೇಜರ್ ಜನರಲ್ ಸಭೆಯ ಬಳಿಕ ಚೀನಾ ಸೈನಿಕರನ್ನು ಬಿಡುಗಡೆ ಮಾಡಿದೆ. ಶಸ್ತ್ರಾಸ್ತ್ರ ರಹಿತವಾಗಿದ್ದ ಯೋಧರು ಭಾರತದ ಸೇನಾ ಕ್ಯಾಂಪ್‌ಗೆ ವಾಪಾಸಾಗಿದ್ದಾರೆ
ಲಡಾಖ್(ಜೂ.19): ಗಲ್ವಾನ್ ಗಡಿ ಸಂಘರ್ಷದ ವೇಳೆ ಭಾರತದ 10 ಸೈನಿಕರನ್ನು ಚೀನಾ ಸೆರೆ ಹಿಡಿದಿತ್ತು. ಇದೀಗ ಗುರುವಾರ(ಜೂ.18) ಸಂಜೆ 5 ಗಂಟೆಗೆ ಚೀನಾ ವಶದಲ್ಲಿದ್ದ 10 ಸೈನಿಕರನ್ನು ಬಿಡುಗಡೆ ಮಾಡಿದೆ.
ಓರ್ವ ಲೆಫ್ಟಿನೆಂಟ್ ಕರ್ನಲ್ ಹಾಗೂ ಮೂವರು ಮೇಜರ್ ಸೇರಿ 10 ಮಂದಿ ಭಾರತದ ಸೈನಿಕರನ್ನು ಚೀನಾ ಒತ್ತೆಯಿಟ್ಟುಕೊಂಡಿತ್ತು. ಗುರುವಾರ ಸಂಜೆ ನಡೆದ ಮೇಜರ್ ಜನರಲ್ ಸಭೆಯ ಬಳಿಕ ಚೀನಾ ಸೈನಿಕರನ್ನು ಬಿಡುಗಡೆ ಮಾಡಿದೆ. ಶಸ್ತ್ರಾಸ್ತ್ರ ರಹಿತವಾಗಿದ್ದ ಯೋಧರು ಭಾರತದ ಸೇನಾ ಕ್ಯಾಂಪ್‌ಗೆ ವಾಪಾಸಾಗಿದ್ದಾರೆ.
ಭಾರತದ ಭೂಮಿ ಕಬಳಿಸಿದ ನೇಪಾಳ ನಕ್ಷೆಗೆ ಅಂಗೀಕಾರ
ಗಲ್ವಾನ್ ಗಡಿ ಪ್ರದೇಶದಲ್ಲಿ ನಡೆದ ಭಾರತ-ಚೀನಿ ಪಡೆಗಳ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಮತ್ತಷ್ಟು ಯೋಧರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಸಂಘರ್ಷ ನಡೆದ ಮೂರು ದಿನಗಳ ಬಳಿಕ ಭಾರತದ 10 ಯೋಧರು ಸುರಕ್ಷಿತವಾಗಿ ವಾಪಾಸಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.