ಚೀನಾ ಕಿರಿಕ್ ಬೆನ್ನಲ್ಲೇ ತವಾಂಗ್ ಗಡಿಯಲ್ಲಿ ಭಾರತೀಯ ವಾಯುಪಡೆಯ ಹದ್ದಿನ ಕಣ್ಣು!
ಲಡಾಖ್‌ನಲ್ಲಿ ಕಿರಿಕ್ ಸಾಧ್ಯವಿಲ್ಲ ಎಂದು ಅರಿತ ಚೀನಾ ಇದೀಗ ಗಮನವನ್ನೇ ಅರುಣಾಚಲಕ್ಕೆ ಶಿಫ್ಟ್ ಮಾಡಿದೆ. ಆದರೆ ಮೊದಲ ಪ್ರಯತ್ನದಲ್ಲೇ ಚೀನಾ ಸೊಕ್ಕಡಗಿದೆ. ಇದೀಗ ಗಡಿಯಲ್ಲಿ ಭಾರತೀಯ ವಾಯುಪಡೆ ಕಸರತ್ತು ಆರಂಭಿಸಿದೆ.
2017ರಲ್ಲಿ ಡೋಕ್ಲಾಮ್, 2020ರಲ್ಲಿ ಲಡಾಖ್ ಇದೀಗ ತವಾಂಗ್. ಚೀನಾ ಭಾರತದ ವಿರುದ್ದ ಕಿರಿಕ್ ಮಾಡುತ್ತಲೇ ಇದೆ. ಆದರೆ ಇತ್ತೀಚಿನ ಎಲ್ಲಾ ಸಂಘರ್ಷಗಳಲ್ಲಿ ಚೀನಾ ಹಿನ್ನಡೆ ಅನುಭವಿಸಿದೆ. ಇದೀಗ ಡೋಕ್ಲಾಮ್ ಹಾಗೂ ಲಡಾಖ್‌ನಲ್ಲಿ ಆಟ ನಡೆಯಲ್ಲ ಎಂದು ಅರುಣಾಚಲ ಪ್ರದೇಶದ ತವಾಂಗ್ ಮೇಲೆ ಕಣ್ಣಿಟ್ಟ ಚೀನಾಗೆ ಮೊದಲ ಯತ್ನಕ್ಕೆ ಭಾರತೀಯ ಚೀನಾ ತಕ್ಕ ಉತ್ತರ ನೀಡಿದೆ. ಬಾಲ ಬಿಚ್ಚಿದ ಡ್ರ್ಯಾಗನ್ ಸೇನೆಯಿಂದ ಶಾಕ್ ಟ್ರೀಟ್ಮೆಂಟ್ ನೀಡಿದ ಭಾರತೀಯ ಸೇನೆಗೆ ಇದೀಗ ವಾಯುಪಡೆಯ ಬಲವೂ ಸಿಕ್ಕಿದೆ. ಗಡಿಯಲ್ಲಿ ಇದೀದ ಭಾರತೀಯ ವಾಯುಪಡೆ ಹದ್ದಿನ ಕಣ್ಣಿಟ್ಟಿದೆ.