
ಎಲ್ಲೇ ಹೋದರು ಭಾರತದ ಟಾರ್ಗೆಟ್‌ನಿಂದ ಮಿಸ್ ಆಗಲ್ಲ, ಪಾಕಿಸ್ತಾನಕ್ಕೆ ಎಚ್ಚರಿಕೆ
ಭಾರತದ ದಾಳಿಯಿಂದ ನಲುಗಿ ಹೋಗಿರುವ ಪಾಕಿಸ್ತಾನ, ರಾವಲ್ಪಿಂಡಿಯಿಂದ ಇಸ್ಲಾಮಾಬಾದ್‌ಗೆ ಸೇನಾ ಹೆಡ್‌ಕ್ವಾರ್ಟರ್ ಸ್ಥಳಾಂತರಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಭಾರತೀಯ ಸೇನಾಧಿಕಾರಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಭಾರತದ ಆಪರೇಶನ್ ಸಿಂದೂರ್‌ನಿಂದ ಪಾಕಿಸ್ತಾನ ಕಂಗಾಲಾಗಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಜಾಯಮಾನದ ಪಾಕಿಸ್ತಾನ ತಾನೇ ಯುದ್ಧ ಗೆದ್ದದಂತೆ ವರ್ತಿಸುತ್ತಿದೆ. ಇದರ ನಡುವೆ ತನಗಾಗಿರುವ ನಷ್ಟ, ದಾಳಿಯ ಪರಿಣಾಮ ಮುಚ್ಚಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಪೈಕಿ ಪಾಕಿಸ್ತಾನ ಸೇನಾ ಹೆಡ್‌ಕ್ವಾರ್ಟರ್ ಬಳಿಯೇ ಭಾರತದ ಮಿಸೈಲ್ ಬಿದ್ದ ಕಾರಣ ಇದೀಗ ರಾವಲ್ಪಿಂಡಿಯಿಂದ ಸೇನಾ ಮುಖ್ಯಕಚೇರಿಯನ್ನು ಇಸ್ಲಾಮಾಬಾದ್‌ಗೆ ಸ್ಥಳಾಂತರಿಸಲು ಪಾಕಿಸ್ತಾನ ಮುಂದಾಗಿದೆ. ಇದರ ಬೆನ್ನಲ್ಲೇ ಭಾರತದ ಡೈರೆಕ್ಟರ್ ಜನರಲ್ ಆರ್ಮಿ ಏರ್ ಡಿಫೆನ್ಸ್ ಐವಾನ್ ಡಿ ಕುನ್ಹ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪಾಕಿಸ್ತಾನದ ಯಾವುದೇ ಮೂಲೆಗೆ ಹೋದರೂ, ಭಾರತದ ಟಾರ್ಗೆಟ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದೆ.