IAF Chopper Crash: ನೀಲಗಿರಿ ಪರ್ವತ ಹಾದಿಯಲ್ಲಿ ಹೆಲಿಕಾಪ್ಟರ್ ತೆರಳಿದ್ದೇ ತಪ್ಪಾಯ್ತಾ? ತಜ್ಞರು ಹೇಳೋದೇನು?
*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ಪಶ್ಮಿಮ ಘಟ್ಟ ಆರಂಭವಾಗುವ ಪ್ರದೇಶದಲ್ಲಿ ಸದಾ ದಟ್ಟ ಮಂಜು
*ತಮಿಳುನಾಡು ದುರಂತ ನಡೆದ ವಾಯುಮಾರ್ಗದ ಬಗ್ಗೆ ತಜ್ಞರ ವಿಶ್ಲೇಷಣೆ!
ವೆಲ್ಲಿಂಗ್ಟನ್(ಡಿ.08): ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು, ಭಾರತೀಯ ವಾಯುಪಡೆಯ ಎಂಐ-17 ವಿ5 ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ (CDS General Bipin Rawat), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಎಎಫ್ ಟ್ವೀಟ್‌ನಲ್ಲಿ (IAF Tweet) ತಿಳಿಸಿದೆ.
IAF Chopper Crash: ಬದುಕುಳಿದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!
ಈ ಘಟನೆಯಿಂದ ಇಡೀ ದೇಶವೇ ದಿಗ್ಭ್ರಾಂತಗೊಂಡಿದೆ. ಈ ಬೆನ್ನಲ್ಲೇ ಉನ್ನತ ಅಧಿಕಾರಿಗಳು ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಪಾಲಿಸಬೇಕಾದ ಪ್ರೋಟೋಕಾಲ್ (Protocol) ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ನೀಲಗಿರಿ ಪರ್ವತ ( Nilagiri Hills) ಈ ಹಾದಿಯಲ್ಲಿ ಹೆಲಿಕಾಪ್ಟರ್ ತೆರಳಿದ್ದೇ ತಪ್ಪಾಯ್ತಾ? ಎಂಬ ಬಗ್ಗೆ ತಜ್ಞರು (Experts) ವಿಶ್ಲೇಷಿಸಿದ್ದು ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ. ಪಶ್ಮಿಮ ಘಟ್ಟ ಆರಂಭವಾಗುವ ಪ್ರದೇಶದಲ್ಲಿ ಸದಾ ದಟ್ಟ ಮಂಜು ಆವರಿಸಿರುತ್ತದೆ. ಹಾಗಾಗಿ ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ಪ್ರಯಾಣ ಕಷ್ಟಕರ ಎಂದು ತಜ್ಞರು ಹೇಳಿದ್ದಾರೆ.