Asianet Suvarna News Asianet Suvarna News

IAF Chopper Crash: ಬದುಕುಳಿದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್
*ಬದುಕುಳಿದ ವಾಯು ಸೇನೆಯ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!

Shaurya Chakra awardee Group Captain Varun Singh sole survivor of IAF chopper crash under treatment mnj
Author
Bengaluru, First Published Dec 8, 2021, 8:27 PM IST

ವೆಲ್ಲಿಂಗ್ಟನ್(ಡಿ.08): ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು, ಈ ಭಾರತೀಯ ವಾಯುಪಡೆಯ ಎಂಐ-17 ವಿ5 ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ (CDS General Bipin Rawat), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ, ಮಧ್ಯಾಹ್ನ 12.20ಕ್ಕೆ ಪತನಗೊಂಡಿದೆ. 

ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಎಎಫ್ ಟ್ವೀಟ್‌ನಲ್ಲಿ (IAF Tweet) ತಿಳಿಸಿದೆ. ಟ್ವಿಟರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದು  ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. 

 

 

ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!

ಬದುಕುಳಿದ  ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿ (Aerial Emergency) ಸಂದರ್ಭದಲ್ಲಿ ಎಲ್‌ಸಿಎ ತೇಜಸ್ (LCA Tejas) ಯುದ್ಧ ವಿಮಾನವನ್ನು ಉಳಿಸಿದ್ದಕ್ಕಾಗಿ ಶೌರ್ಯ ಚಕ್ರವನ್ನು (Shaurya Chakra awardee) ನೀಡಲಾಗಿತ್ತು. ಈ ವರ್ಷದ ಆಗಸ್ಟ್ 15 ರಂದು, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (LCA) ಸ್ಕ್ವಾಡ್ರನ್‌ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.

CDS Bipin Rawat Death: ತಂದೆ ಇದ್ದ ಬೆಟಾಲಿಯನ್‌ನಲ್ಲೇ ಬಿಪಿನ್ ರಾವತ್ ಮೊದಲ ಪೋಸ್ಟಿಂಗ್!

ರಕ್ಷಣಾ ಸಚಿವಾಲಯ ಹೇಳಿಕೆಯ ಪ್ರಕಾರ, ವಿಂಗ್ ಕಮಾಂಡರ್ ವರುಣ್ ಸಿಂಗ್ ಅವರು ಅಕ್ಟೋಬರ್ 12, 2020 ರಂದು, ಫ್ಲೈಟ್ ಕಂಟ್ರೋಲ್ ಸಿಸ್ಟಮ್ (FCA) ಮತ್ತು ಪ್ರೆಶರೈಜೇಶನ್‌ ಸಿಸ್ಟಮ್‌  (Pressurisation system) ಸರಿಪಡಿಸಿದ ನಂತರ, ಪ್ರಮುಖ ಸೇನಾ ನೆಲೆಯಿಂದ ದೂರವಿರುವ ಎಲ್‌ಸಿಎಯಲ್ಲಿ ಸರಿಪಡಿಸಿದ ಸಿಸ್ಟಮ್ ಚೆಕ್ ಮಾಡಲು ಸೋರ್ಟಿಯನ್ನು (sortie) ಹಾರಿಸುತ್ತಿದ್ದರು. ಈ ಸಮಯದಲ್ಲಿ ಕಾಕ್‌ಪಿಟ್ (Cockpit) ಪ್ರೆಶರೈಜೇಶನ್‌ ಸಿಸ್ಟಮ್‌  ವಿಫಲವಾಗಿತ್ತು.

 

 

ಜೀವನ ಅಪಾಯದಲ್ಲಿದ್ದರೂ, ಅವರು LCA ಯಶಸ್ವಿಯಾಗಿ ಲ್ಯಾಂಡ್‌!

"ಅವರು ವೈಫಲ್ಯವನ್ನು ಸರಿಯಾಗಿ ಗುರುತಿಸಿ  ವಿಮಾನವನ್ನು ಲ್ಯಾಂಡ್‌ ಮಾಡಿದ್ದರು. ಲ್ಯಾಂಡಿಂಗ್‌ ಮಾಡುವಾಗ, ಫ್ಲೈಟ್ ಕಂಟ್ರೋಲ್ ಸಿಸ್ಟಮ್ ವಿಫಲವಾಯಿತು ಮತ್ತು ವಿಮಾನದ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳಲು ಇದು ಕಾರಣವಾಯಿತು. ಇದು ಎಂದಿಗೂ ಸಂಭವಿಸದ ದುರಂತ ವೈಫಲ್ಯವಾಗಿತ್ತು," ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿತ್ತು.

CDS Bipin Rawat ಮಾಡಿದ ಆ ಒಂದು ಕೆಲಸ: ನಮ್ಮ ಸೇನೆಯ ಶಕ್ತಿ ಡಬಲ್, ಬೆಚ್ಚಿ ಬಿದ್ದ ಪಾಕ್, ಚೀನಾ!

"ಅವರ ಉನ್ನತ ಮಟ್ಟದ ವೃತ್ತಿಪರತೆ, ಸಂಯಮ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ, ಅವರ ಜೀವ ಅಪಾಯದಲ್ಲಿದ್ದರೂ, ಅವರು LCA Tejas ಅನ್ನು ಯಶಸ್ವಿಯಾಗಿ ಲ್ಯಾಂಡ್‌ ಮಾಡಿದರು. ಜತೆಗೆ ವಿಮಾನ ನೆಲೆಯಲ್ಲಿದ್ದ ಸಾರ್ವಜನಿಕ ಆಸ್ತಿ ಮತ್ತು ಜನರನ್ನು ಕೂಡ ಸಂರಕ್ಷಿಸಿದರು" ಎಂದು ರಕ್ಷಣಾ ಸಚಿವಾಲಯ  ಹೇಳಿತ್ತು.

ಸಶಸ್ತ್ರ ಪಡೆಗಳಿಗೆ ಮತ್ತು ದೇಶಕ್ಕೆ ತುಂಬಲಾರದ ನಷ್ಟ: ರಾಜನಾಥ್‌ ಸಿಂಗ್‌!

ಬಿಪಿನ್‌ ರಾವತ್‌ ನಿಧನಕ್ಕೆ ಸಂತಾಪ ಸೂಚಿಸಿರುವ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದು ರಕ್ಷಣಾಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನಿಧನ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ. " ತಮಿಳುನಾಡಿನಲ್ಲಿ ಇಂದು ನಡೆದ ಅತ್ಯಂತ ದುರದೃಷ್ಟಕರ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಸಶಸ್ತ್ರ ಪಡೆಗಳ ಸಿಬ್ಬಂದಿಯ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಅಕಾಲಿಕ ಮರಣವು ನಮ್ಮ ಸಶಸ್ತ್ರ ಪಡೆಗಳಿಗೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ" ಎಂದು ಹೇಳಿದ್ದಾರೆ.

Follow Us:
Download App:
  • android
  • ios