'ಟ್ರಂಪ್ ಭಾರತಕ್ಕೆ ಬಂದಿದ್ದು ನಮಗೆ ಹೆಮ್ಮೆ, ಅನಿವಾಸಿ ಭಾರತೀಯರಿಗೂ ಹೆಮ್ಮೆ'

ಅಮೆರಿಕ- ಭಾರತದ ನಡುವಿನ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ| ಈ ವಿಶ್ವಾಸ ಇತಿಹಾಸದಲ್ಲಿ ಅತಿಹೆಚ್ಚಿನ ಮಟ್ಟದಲ್ಲಿ ಬಲಿಷ್ಠವಾಗಿದೆ| ಅಮೆರಿಕದಲ್ಲಿರುವ ಭಾರತೀಯರು, ಅಮೆರಿಕದ ಪ್ರಗತಿಯ ಪಾಲುದಾರರಾಗಿರಲು ಹೆಮ್ಮೆಪಡುತ್ತಾರೆ

Share this Video
  • FB
  • Linkdin
  • Whatsapp

ಅಹಮದಾಬಾದ್[ಫೆ.24]: ಎರಡು ದಿನದ ಪ್ರವಾಸದ ಮೇರೆಗೆ ಭಾರತಕ್ಕೆ ಆಗಮಿಸಿರುವ ಟ್ರಂಪ್ ಅಹಮದಾಬಾದ್‌ನ ಮೊಟೆರೋ ಸ್ಟೇಡಿಯಂ ಉದ್ಘಾಟಿಸಿ ಮಾತನಾಡಿದ್ದಾರೆ. ಈ ವೇಳೆ ಭಾರತ ಹಾಗೂ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಇತ್ತ ಮೋದಿ ಕೂಡಾ ಭಾರತ ಹಾಗೂ ಅಮೆರಿಕಾ ನಡುವಣ ಸಂಬಂಧ ಅಬೀವೃದ್ಧಿಯಾಗುವ ಕುರಿತು ತಮ್ಮ ಮಾತುಗಳಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಭಾಷಣದ ಬಳಿಕ ಮಾತನಾಡಿದ ಮೋದಿ 'ಅಮೆರಿಕ- ಭಾರತದ ನಡುವಿನ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವಿಶ್ವಾಸ ಇತಿಹಾಸದಲ್ಲಿ ಅತಿಹೆಚ್ಚಿನ ಮಟ್ಟದಲ್ಲಿ ಬಲಿಷ್ಠವಾಗಿದೆ. ಅಮೆರಿಕದಲ್ಲಿರುವ ಭಾರತೀಯರು, ಅಮೆರಿಕದ ಪ್ರಗತಿಯ ಪಾಲುದಾರರಾಗಿರಲು ಹೆಮ್ಮೆಪಡುತ್ತಾರೆ. ದೊಡ್ಡ ಗುರಿಯನ್ನಿಟ್ಟುಕೊಂಡು, ಗುರಿ ಸಾಧಿಸುವುದು ಭಾರತದ ಸ್ವಭಾವ’ ಎಂದಿದ್ದಾರೆ.

ಅಲ್ಲದೇ 'ಪ್ರಪಂಚದ ಅತಿದೊಡ್ಡ ಆರೋಗ್ಯ ವಿಮೆ ಭಾರತದಲ್ಲಿ ಜಾರಿಯಲ್ಲಿದೆ. ಪ್ರಪಂಚದ ಅತಿದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ, ಪ್ರಪಂಚದ ಅತಿದೊಡ್ಡ ಒಳಚರಂಡಿ ಯೋಜನೆ ರೂಪಿಸಿದ್ದೇವೆ’ ಎಂದಿದ್ದಾರೆ.
150 ಅನುಪಯುಕ್ತ ಕಾನೂನುಗಳನ್ನು ತೆಗೆದುಹಾಕಿದ್ದೇವೆ

Related Video