Asianet Suvarna News Asianet Suvarna News

ಅವಳು ಟಾಪ್‌-ಪ್ಯಾಂಟೂ ಹಾಕಿದ್ದೇ ತಪ್ಪಾಯ್ತಾ..? 17 ವರ್ಷದ ಸಂಸಾರದಲ್ಲಿ ಎಷ್ಟೆಲ್ಲಾ ನಡೆದುಬಿಟ್ಟಿತ್ತು..!

ಪ್ರೀತಿಸಿ ಮದುವೆಯಾದವಳ ಕೊಂದುಬಿಟ್ಟ..!
ಆ ಸಂಸಾರದಲ್ಲಿ ಪ್ರತಿ ನಿತ್ಯವೂ ಜಗಳವೇ..!
ಎಸ್‌ ಪಿ ಕಚೇರಿಯಲ್ಲೇ ಡೆಡ್ಲಿ ಮರ್ಡರ್..!

ಅದು ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ(SP office). ಪ್ರತಿ ನಿತ್ಯ ಜನರು ಒಂದಿಲ್ಲೊಂದು ಕಷ್ಟಗಳನ್ನ ಹೇಳಿಕೊಂಡು ಇದೇ ಕಚೇರಿಗೆ ಬರ್ತಿದ್ರು. ಠಾಣೆಗಳಲ್ಲಿ ಪೊಲೀಸರು(constable) ಸರಿಯಾಗಿ ರೆಸ್ಪಾಂಡ್ ಮಾಡಲಿಲ್ಲ ಅಂದ್ರೆ ಸಾರ್ವಜನಿಕರು ಜಿಲ್ಲೆಯಲ್ಲೇ ಟಾಪ್ ಮೋಸ್ಟ್ ಪೊಲೀಸ್ ಆಫೀಸರನ್ನ ಹುಡುಕಿಕೊಂಡು ಇದೇ ಕಚೇರಿಗೆ ಬರ್ತಿದ್ರು. ಪ್ರತೀ ನಿತ್ಯ ಇಲ್ಲಿ ಹತ್ತಾರು ಮಂದಿ ಕಣ್ಣೀರು ಹಾಕುತ್ತಲೇ ಬರ್ತಿದ್ರು. ಆದ್ರೆ ಇವತ್ತು ಅದೇ ಕಚೇರಿಯ ಆವರಣದಲ್ಲಿ ರಕ್ತ ಹರಿದಿತ್ತು. ಕಷ್ಟ ಹೇಳಿಕೊಳ್ಳಲು ಬಂದವಳೇ ಹೆಣವಾಗಿದ್ಲು. ಇನ್ನೂ ಅವಳ ಕಥೆ ಮುಗಿಸಿದ್ದು(Murder) ತಾಳಿ ಕಟ್ಟಿದ ಗಂಡನೇ. ಇಲ್ಲೊಬ್ಬ ಗಂಡ ಅದರಲ್ಲೂ ಸಮಾಜದಲ್ಲಿ ಒಬ್ಬ ಜವಬ್ದಾರಿಯುತ ಸ್ಥಾನದಲ್ಲಿರುವವನು ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಹಾಡಹಗಲಲ್ಲೇ. ನಡುರಸ್ತೆಯಲ್ಲೇ ಕೊಂದು ಮುಗಿಸಿದ್ದಾನೆ. ಹಾಸನ(Hassan) ನಗರದ ಆರ್.ಸಿ.ರಸ್ತೆಯಲ್ಲಿರೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ. ಎಸ್.ಪಿ ಕಚೇರಿಯ ಆವರಣದಲ್ಲೇ ಇವತ್ತು ರಕ್ತ ಹರಿದಿತ್ತು. ತನ್ನ ಕಷ್ಟವನ್ನ ಎಸ್.ಪಿ ಎದುರು ಹೇಳಿಕೊಳ್ಳಲು ಬಂದ ಒಬ್ಬ ಹೆಣ್ಣುಮಗಳನ್ನ ಒಬ್ಬ ಕಿರಾತಕ ಕಚೇರಿಯ ಆವರಣದಲ್ಲೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದು ಹಾಕಿದ್ದಾನೆ.

ಇದನ್ನೂ ವೀಕ್ಷಿಸಿ:  ಬ್ರಿಟಿಷ್ ಕಾಲದ 3 ಕ್ರಿಮಿನಲ್ ಕಾನೂನು ನೇಪಥ್ಯಕ್ಕೆ..! ಹೊಸ ಕಾನೂನು ವ್ಯವಸ್ಥೆಯಲ್ಲಿ ಏನೆಲ್ಲ ಬದಲಾಗಲಿದೆ..?

Video Top Stories