Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಶನಿವಾರ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ.

ನಾಳೆ ಗುರು ಪೌರ್ಣಮಿ ಇದ್ದು, ಹಾಗಾಗಿ ಇಂದು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಶನಿ ದೇವನಿಗೆ ಎಳ್ಳಿನ ತೈಲವನ್ನು ಸಮರ್ಪಣೆ ಮಾಡಿ. ಸಂಕಟ, ವ್ಯಥೆ ಪಡುವವರು ಶನಿದೇವನ ಪ್ರಾರ್ಥನೆ ಮಾಡಿ. ಮೇಷ ರಾಶಿಯವರಿಗೆ ಧರ್ಮ ಚಿಂತನೆಯ ದಿನ. ವೃತ್ತಿಯಲ್ಲಿ ಅನುಕೂಲ. ಕುಟುಂಬದಲ್ಲಿ ಸಹಕಾರ. ಪ್ರಯಾಣದಲ್ಲಿ ತೊಂದರೆ. ನೀರಿನ ಎಚ್ಚರಿಕೆ ಇರಲಿ. ದುರ್ಗಾ ಕವಚ ಪಠಿಸಿ. ವೃಷಭ ರಾಶಿಯವರಿಗೆ ವ್ಯಥೆಯ ದಿನ. ಸಹೋದರಲಲ್ಲಿ ಭಿನ್ನಾಭಿಪ್ರಾಯ. ಭಯದ ವಾತಾವರಣ. ಆಂಜನೇಯ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಹಗರಣಗಳ ನಡುವೆ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷ ಶಾಸಕರ ಅಸಮಾಧಾನದ ಬಿಸಿ!

Related Video