ಮೇಘಸ್ಫೋಟಕ್ಕೆ ಮತ್ತೆ ಉತ್ತರಕ್ಕೆ ಜಲ ಕಂಟಕ: ವರುಣ ಮೃದಂಗದ 20 ದೃಶ್ಯಗಳು ಇಲ್ಲಿವೆ ನೋಡಿ
ಮಳೆಯ ರೌದ್ರ ನರ್ತನದ ಭಯಾನಕ ದೃಶ್ಯಗಳ 20 ವಿಡಿಯೋಗಳು ಇಲ್ಲಿವೆ.
ಉತ್ತರ ಭಾರತದಲ್ಲಿ ಮಳೆ ಮತ್ತೆ ಆರ್ಭಟಿಸುತ್ತಿದೆ. ಮುಂದಿನ ಕೆಲ ದಿನ 5 ರಾಜ್ಯಗಳಲ್ಲಿ ಭಾರೀ ಮಳೆಯ ಅಲರ್ಟ್ ನೀಡಲಾಗಿದೆ. ಅದ್ರಲ್ಲೂ ಹಿಮಾಚಲದಲ್ಲಿ ಮೇಘಸ್ಫೋಟಗೊಂಡು ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ. ಕರ್ನಾಟಕ, ಕೇರಳ ಸೇರಿದಂತೆ ಇನ್ನು ಹಲವು ರಾಜ್ಯಗಳಲ್ಲಿ ವರುಣ ತನ್ನ ಡೆಡ್ಲಿ ಆಟ ಮತ್ತೆ ಶುರು ಮಾಡಿದ್ದಾನೆ. ಗುಜರಾತ್‌ನಲ್ಲಿ ಭಾರೀ ಮಳೆಗೆ ಭೀಕರ ಪ್ರವಾಹ ಎದುರಾಗಿದೆ. ಪ್ರವಾಹದ ರಭಸಕ್ಕೆ ದೈತ್ಯ ಸೇತುವೆ ಜಲಸಮವಾಗಿದೆ. ಪ್ರವಾಹದಲ್ಲಿ ಸಿಲುಕಿದವರ ಪರದಾಟ ತಾರಕಕ್ಕೇರಿದೆ. ಹಲವೆಡೆ ಮನೆಗಳು ಕುಸಿದು ಹೋಗಿವೆ. ಬೆಟ್ಟ ಗುಡ್ಡಗಳು ಧರಾಶಾಹಿಯಾಗಿವೆ. ಮಳೆಯ ರೌದ್ರ ನರ್ತನದ 20 ಭಯಾನಕ ದೃಶ್ಯಗಳು ಈ ವಿಡಿಯೋದಲ್ಲಿವೆ ನೋಡಿ.