Rain lashed Mumbai: ಮಹಾಮಳೆಗೆ ಮುಳುಗಿದ ವಾಣಿಜ್ಯ ನಗರಿ ಮುಂಬೈ..ಆರು ಗಂಟೆಗಳಲ್ಲಿ 300 ಮಿ.ಮೀಗಿಂತಲೂ ಅಧಿಕ ವರ್ಷಧಾರೆ!

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಮುಳುಗಿ ಹೋಗಿವೆ. ಮುಂಬೈನ ಲೋಕಲ್ ಟ್ರೈನ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

Share this Video
  • FB
  • Linkdin
  • Whatsapp

ಮಹಾಮಳೆಗೆ ವಾಣಿಜ್ಯ ನಗರಿ ಮುಂಬೈ(Mumbai) ಮುಳುಗಿದ್ದು, ವರ್ಲಿ, ಥಾಣೆ, ಸೇರಿದಂತೆ ಹಲವು ಪ್ರದೇಶಗಳಿಗೆ ಜಲದಿಗ್ಬಂಧನ ಹಾಕಲಾಗಿದೆ. ಭಾರೀ ಮಳೆಯಿಂದ(Rain) ನೀರಿನಲ್ಲಿ ಬೈಕ್‌ಗಳು ಕೊಚ್ಚಿಹೋಗಿವೆ. ಮುಂಬೈನ ಲೋಕಲ್ ಟ್ರೈನ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಸದ್ಯ ಭಾರೀ ಮಳೆಗೆ ಮಹಾನಗರಿ ಮುಂಬೈ ಜನ ತತ್ತರಿಸಿ ಹೋಗಿದ್ದಾರೆ. ಮುಂಬೈನ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಆರು ಗಂಟೆಗಳಲ್ಲಿ ಮಹಾನಗರಿ ಮುಂಬೈನಲ್ಲಿ ದಾಖಲೆ ಮಳೆಯಾಗಿದೆ ಎಂದು ತಿಳಿದುಬಂದಿದೆ. ಆರು ಗಂಟೆಗಳಲ್ಲಿ 300 ಮಿ.ಮೀಗಿಂತಲೂ ಅಧಿಕ ಮಳೆಯಾಗಿದೆಯಂತೆ. ಇನ್ನೂ ಇತ್ತಾ ರಾಜ್ಯದಲ್ಲಿ ಕೂಡ ಉತ್ತಮ ಮಳೆಯಾಗುತ್ತಿದೆ.

ಇದನ್ನೂ ವೀಕ್ಷಿಸಿ: Divya Vasanth: ಸ್ಪಾ ವ್ಯವಸ್ಥಾಪಕನಿಗೆ ಬೆದರಿಸಿ ಸುಲಿಗೆ ಪ್ರಕರಣ: ಕೇಸ್‌ ಸಂಬಂಧ ಇಬ್ಬರು ಆರೋಪಿಗಳ ಬಂಧನ

Related Video