Asianet Suvarna News Asianet Suvarna News

Divya Vasanth: ಸ್ಪಾ ವ್ಯವಸ್ಥಾಪಕನಿಗೆ ಬೆದರಿಸಿ ಸುಲಿಗೆ ಪ್ರಕರಣ: ಕೇಸ್‌ ಸಂಬಂಧ ಇಬ್ಬರು ಆರೋಪಿಗಳ ಬಂಧನ

ಸುಲಿಗೆ ಕೃತ್ಯಗಳಿಗೆ ವಾಟ್ಸಪ್‌ನಲ್ಲಿ ಗ್ರೂಪ್ ಮಾಡಿದ್ದ ದಿವ್ಯಾ
ಮನರಂಜನಾ ವಾಹಿನಿ ಹಾಸ್ಯ ಕಾರ್ಯಕ್ರಮದಲ್ಲಿ ನಟನೆ 
ಐಷಾರಾಮಿ ಜೀವನಕ್ಕಾಗಿ ಹಣ ಸಂಪಾದಿಸಲು ಅಡ್ಡ ಮಾರ್ಗ

ಸ್ಪಾ ವ್ಯವಸ್ಥಾಪಕನಿಗೆ ಬೆದರಿಸಿ ಸುಲಿಗೆ ಪ್ರಕರಣಕ್ಕೆ(Extortion of spa manager case) ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ಬಂಧನವಾಗಿದೆ. ರಾಜಾನುಕುಂಟೆಯ ವೆಂಕಟೇಶ್ ಎಂಬಾತನ ಬಂಧನವಾಗಿದ್ದು, ನಿರೂಪಕಿ ದಿವ್ಯಾ ವಸಂತ( Divya Vasanth) ಸೋದರ ಕೂಡ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಆರೋಪಿಗಳಿಂದ 3 ಮೊಬೈಲ್‌ನನ್ನು ಪೊಲೀಸರು (Police)ಜಪ್ತಿ ಮಾಡಿದ್ದಾರೆ. ಕೇಸ್ ಆಗುತ್ತಿದ್ದಂತೆ ದಿವ್ಯಾ ವಸಂತ ತಲೆ ಮರೆಸಿಕೊಂಡಿದ್ದಾಳೆ. ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯಾ ವಸಂತ, ದಿವ್ಯಾ, ಸಚಿನ್, ಆಕಾಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಂದ ಲಗ್ಗೆರೆಯಲ್ಲಿರುವ ದಿವ್ಯಾ ಮನೆಯಲ್ಲಿ ಶೋಧ ನಡೆಸಲಾಗಿದೆ. ಕೆಲ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕ್ಯಾಮರಾ, ಲ್ಯಾಪ್ ಟಾಪ್ ತೆಗೆದುಕೊಂಡು ದಿವ್ಯಾ ಪರಾರಿಯಾಗಿದ್ದಾಳೆ. ದಿವ್ಯಾ ತಾಯಿಯನ್ನು ಠಾಣೆಗೆ ಕರೆಸಿರುವ ಜೆಬಿ ನಗರ ಪೊಲೀಸರು, ಪೊಲೀಸರ ಮುಂದೆ ದಿವ್ಯಾ ತಾಯಿ ಕಣ್ಣೀರು ಹಾಕಿದ್ದಾರೆ. ವೆಂಕಟೇಶ್‌ನಿಂದಲೇ ದಿವ್ಯಾ ತಪ್ಪು ದಾರಿ ಹಿಡಿದಿದ್ದಾಳೆ ಎಂದ ದಿವ್ಯಾ ತಾಯಿ. 

ಇದನ್ನೂ ವೀಕ್ಷಿಸಿ:  ಹುಚ್ಚ ಸಿನಿಮಾ ರೋಚಕ ಕಥೆ ಬಿಚ್ಚಿಟ್ಟ ನಿರ್ಮಾಪಕ ರೆಹಮಾನ್! ಸಿನಿಮಾಗಾಗಿ ರೀಯಲ್ ಆಗಿ ತಲೆ ಬೋಳಿಸಿಕೊಂಡಿದ್ದ ಸುದೀಪ್‌ !

Video Top Stories