Asianet Suvarna News Asianet Suvarna News
breaking news image

ಮಣಿಪುರ ಯುವತಿಗೆ ರ‍್ಯಾಪಿಡೋ ಬೈಕ್‌ ಚಾಲಕನಿಂದ ಆಶ್ಲೀಲ ಮೆಸೇಜ್‌: ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಆರೋಪ

ಎಲೆಕ್ಟ್ರಾನಿಕ್‌ ಸಿಟಿಗೆ ರ‍್ಯಾಪಿಡೋ ಬೈಕ್‌ನಲ್ಲಿ ಹೋಗುತ್ತಿರುವಾಗ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
 

ಬೆಂಗಳೂರು: ಮಣಿಪುರ ಯುವತಿಗೆ ಬೆಂಗಳೂರಿನಲ್ಲಿ ಲೈಂಗಿಕ ಕಿರುಕುಳ(Sexual Harassment) ನೀಡಿರುವ ಆರೋಪ ಕೇಳಿಬಂದಿದೆ. ರ‍್ಯಾಪಿಡೋ ಬೈಕ್‌(Rapido Bike) ಬುಕ್‌ ಮಾಡಿರುವ ಮಹಿಳೆಗೆ ಬೈಕ್‌ ಚಾಲಕ ಟಾರ್ಚರ್‌ ನೀಡಿದ್ದಾನೆ ಎನ್ನಲಾಗ್ತಿದೆ. ಮಣಿಪುರದಲ್ಲಿ(Manipur) ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ, ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಮುಗಿಸಿ ಟೌನ್‌ಹಾಲ್‌ನಿಂದ ಮನೆಗೆ ವಾಪಸ್‌ ಆಗುವ ಸಂದರ್ಭದಲ್ಲಿ ಘಟನೆ ನಡೆದಿದೆ. ಎಲೆಕ್ಟ್ರಾನಿಕ್‌ ಸಿಟಿಗೆ ಹೋಗಲು ರ‍್ಯಾಪಿಡೋ ಬೈಕ್‌ ಬುಕ್‌ ಮಾಡಲಾಗಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ. ಅಷ್ಟೇ ಅಲ್ಲದೆ, ಡ್ರಾಪ್ ಮಾಡಿದ ನಂತರ ಬೈಕ್ ಚಾಲಕ ಯುವತಿಯ ಮೊಬೈಲ್​ಗೆ ಕರೆ ಮಾಡಿದ್ದಾನೆ. ನಂತರ ವಾಟ್ಸ್​ಆ್ಯಪ್​ಗೆ ಮೆಸೆಜ್ ಮಾಡಿದ್ದಾನೆ. ಈ ಬಗ್ಗೆ ಮೊಬೈಲ್ ಸ್ಕ್ರೀನ್ ಶಾಟ್ ಸಮೇತ ಯುವತಿ ಮಾಹಿತಿ ಹಂಚಿಕೊಂಡಿದ್ದಾಳೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯುವತಿಯನ್ನು ಸಂಪರ್ಕ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.  

ಇದನ್ನೂ ವೀಕ್ಷಿಸಿ:  Today Horoscope: ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ..ಒಳಿತಿಗಾಗಿ ಇವುಗಳ ದಾನ ಮಾಡಿ

 

Video Top Stories