Asianet Suvarna News Asianet Suvarna News

ಹೆಚ್‌ಡಿಕೆಯಿಂದ ಬ್ರಾಹ್ಮಣ ಸಿಎಂ ಬಾಣ, ಬಿಜೆಪಿ ಕೆಡವಲು ಹೋಗಿ ಖೆಡ್ಡಾಗೆ ಬಿದ್ರಾ ಕುಮಾರಣ್ಣ?

ಬಿಜೆಪಿ ಬ್ರಾಹ್ಮಣ ಮುಖ್ಯಮಂತ್ರಿ ಮಾಡುವ ಹುನ್ನಾರ ಹೇಳಿಕೆ ವಿವಾದದಲ್ಲಿ ಕುಮಾರಸ್ವಾಮಿ, ಒಂದೇ ದಿನ 6 ಯೋಜನೆಗೆ ಚಾಲನೆ ನೀಡಿದ ಮೋದಿ, ಕಬ್ಬು ಬೆಳೆಯುವ ರೈತರ ಆದಾಯ ದ್ವಿಗುಣ, ಎಥೆನಾಲ್ ಯಶೋಗಾಥೆ ಸೇರಿದಂತೆ ಇಂದಿನ ಇಡಿ ದಿನದ ಪ್ರಮುಖ ಸುದ್ದಿಯ ಕಂಪ್ಲೀಟ್ ಪ್ಯಾಕೇಜ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಬಿಜೆಪಿ ವಿರುದ್ಧ ಒಕ್ಕಲಿಗ ಹಾಗೂ ಇತರ ಸಮುದಾಯದ ಮತಗಳನ್ನು ಕ್ರೋಢಿಕರಿಸಲು ಹೆಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಬಾಣ ಬಿಟ್ಟಿದ್ದಾರೆ. ಗೋಡ್ಸೆ, ಗಾಂಧಿ ಕೊಂದ ಡಿಎನ್ಎ ಹೊಂದಿದ ವ್ಯಕ್ತಿಯನ್ನು ಬಿಜೆಪಿ ಸಿಎಂ ಮಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿಯನ್ನು ಟಾರ್ಗೆಟ್ ಮಾಡಿದ್ದಾರೆ. ಜೋಶಿ ಮರಾಠ ಪೇಶ್ವೇ ವಂಶಕ್ಕೆ ಸೇರಿದವರು. ಬಿಜೆಪಿ ಜೋಶಿಯನ್ನು ಸಿಎಂ ಮಾಡುವ ಹುನ್ನಾರ ಮಾಡುತ್ತಿದೆ ಎಂದಿದ್ದಾರೆ. ಬಿಜೆಪಿ ವಿರುದ್ಧದ ಪ್ರಹಾರದ ವೇಳೆ ಹೆಚ್‌ಡಿಕೆ ಬಳಸಿರುವ ಪದಗಳು ಹಾಗೂ ಹುಟ್ಟು ಹಾಕಿದ ಚರ್ಚೆ ಇದೀಗ ಜೆಡಿಎಸ್‌ಗೆ ಮುಳುವಾಗುವಂತೆ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾರನ್ನು ಸೋಲಿಸಲು ಬಳಸಿದ ಪದ ಪ್ರಯೋಗ ಜೆಡಿಎಸ್‌ಗೆ ಮುಳುವಾಗಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್‌ಗೆ ಮತ್ತೆ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ. 

Video Top Stories