Ayodhya: ಕಳೆದುಕೊಂಡಿದ್ದನ್ನು ನ್ಯಾಯಯುತವಾಗಿ ಪಡೆದುಕೊಳ್ಳುವುದೇ ರಾಮನ ಆದರ್ಶ: ಹರೀಶ್‌ ಕಶ್ಯಪ್‌

ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಗ್ಗೆ ಆಧ್ಯಾತ್ಮಕ ಚಿಂತಕರಾದ ಹರೀಶ್‌ ಕಶ್ಯಪ್‌ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
 

First Published Jan 22, 2024, 10:46 AM IST | Last Updated Jan 22, 2024, 10:47 AM IST

ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, 5 ಶತಮಾನಗಳ ಬಳಿಕ ಗತವೈಭವ ಮತ್ತೆ ಮರುಕಳಿಸಿದೆ. ಇನ್ನೂ ಅಯೋಧ್ಯೆಗೆ ಭಕ್ತ ಸಮೂಹ ಹರಿದು ಬರುತ್ತಿದೆ. ಇಂದಿನ ರಾಮ ಮಂದಿರ(Ram Mandir) ಉದ್ಘಾಟನೆ ಬಗ್ಗೆ ಆಧ್ಯಾತ್ಮಕ ಚಿಂತಕರಾದ ಹರೀಶ್‌ ಕಶ್ಯಪ್‌(Harish Kashyap) ಅವರು ಮಾತನಾಡಿದ್ದಾರೆ. ಈ ದಿನ ನಾವು ರಾಮನ ಮಹಿಮೆ ಏನು ಎಂಬುದನ್ನು ನೋಡಬಹುದು. ಶತ-ಶತಮಾನಗಳಿಂದ ಕಳೆದುಕೊಂಡಿದ್ದು, ಇಂದು ಹೊರಬರುತ್ತಿದೆ. ಕೋರ್ಟ್‌ ತೀರ್ಪು ಬರುವ ಮುಂಚೆ ನಾನು ಅಲ್ಲಿಗೆ ಹೋಗಿದ್ದೆ, ಆಗ ನನಗೆ ನೋಡಿ ಕಣ್ಣೀರು ಬಂತು ಎಂದು ಆಧ್ಯಾತ್ಮಕ ಚಿಂತಕರಾದ ಹರೀಶ್‌ ಕಶ್ಯಪ್‌ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  Ram Mandir: ಕೌಸಲ್ಯಸುಪ್ರಜನಿಗೆ ‘ಪಟ್ಟಾಭಿಷೇಕ’ದ ಸಂಭ್ರಮ: ದಶರಥನಂದನ ಊರಿನಲ್ಲಿ ಮೇಳೈಸಿದ ‘ರಾಮರಾಜ್ಯ’