76ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದೆ ಭಾರತ..! ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಮೋದಿ ಕರೆ

76ನೇ ಸ್ವಾತಂತ್ರ್ಯ  ದಿನಾಚರಣಗೆ ಕ್ಷಣಗಣನೆ ಆರಂಭವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮತ್ತೊಮ್ಮೆ ಕೇಂದ್ರ ಸರ್ಕಾರ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದೆ. ಸೋಶಿಯಲ್ ಮೀಡಿಯಾ ಪ್ರೋಫೈಲ್‌ಗೆ ತ್ರಿವಣ  ಚಿತ್ರ ಹಾಕುವಂತೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.
 

First Published Aug 14, 2023, 9:03 AM IST | Last Updated Aug 14, 2023, 9:03 AM IST

76ನೇ  ಸ್ವಾತಂತ್ರ್ಯೋತ್ಸವನ್ನ ಸಂಭ್ರಮದ ಆಚರಣೆಗೆ ಇಡೀ ದೇಶವೇ ಸಜ್ಜಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ (Independence Day) ಒಂದು ದಿನ ಬಾಕಿ ಇರುವಾಗಲೇ ಮನೆ ಮನಗಳಲ್ಲೂ ತ್ರಿವರ್ಣ ರಂಗು ಜೋರಾಗಿದೆ. ಪ್ರಧಾನಿ ಮೋದಿ(Pm Modi) ಹರ್ ಘರ್ ತಿರಂಗಾ ಅಭಿಯಾನಕ್ಕೆ(Har Ghar Tiranga campaign) ಕರೆ ಕೊಟ್ಟಿದ್ದು. ಭಾನುವಾರದಿಂದ  ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ(tricolor flag) ಹಾರಾಡುತ್ತಿದೆ. ಪ್ರಧಾನಿ ಮೋದಿ ಹರ್‌ ಘರ್ ತಿರಂಗಾ ಅಭಿಯಾನಕ್ಕೆ ಕರೆ ಕೊಟ್ಟ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ತಿರಂಗಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಗುಜರಾತ್‌ನ ಅಹಮದಾಬಾದ್ನಲ್ಲಿ ಅಮಿತ್ ಶಾ ತಿರಂಗಾ ಅಭಿಯಾನಕ್ಕೆ  ಚಾಲನೆ ಕೊಟ್ಟರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮನೆ ಮನೆಗಳಲ್ಲಿ ಭಾರತ ತ್ರಿವರ್ಣ ಧ್ವಜ ಹಾರಾಡುತ್ತಿವೆ. ಜಮ್ಮು ಕಾಶ್ಮೀರ ಗಡಿಯಲ್ಲಿ ಯೋಧರು ಕೂಡ ಹರ್‌ ಘರ್ ತಿರಂಗಾ ಅಭಿಯಾನದ ಮೂಲಕ ದೇಶ ಪ್ರೇಮ ಮೆರೆದ್ರು. ಮನೆ ಮನೆಯಲ್ಲಿ ತಿರಂಗ ಹಾರಾಟದ ಜೊತೆಗೆ ಪ್ರತಿಯೊಬ್ಬರೂ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಿಗೆ ತ್ರಿವರ್ಣ ಧ್ವಜ ಹಾಕಿಕೊಳ್ಳಲು ಮೋದಿ ಕರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಸ್ವತಃ ಪ್ರಧಾನಿ ಮೋದಿ ತಮ್ಮ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಗಳಿಗೆ ತ್ರಿವರ್ಣ ಧ್ವಜದ ಫೋಟೋ ಹಾಕಿ, ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಗಳನ್ನು ಬದಲಾಯಿಸೋಣ ಮತ್ತು ದೇಶದೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸೋಣ ಎಂದು ಟ್ವಿಟರ್ನಲ್ಲಿ ದೇಶಭಕ್ತರಿಗೆ ಕರೆಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಕೇರಳದ ಉಲ್ಕೆ ವಿಜ್ಞಾನಿ ಹೆಸರಿನಲ್ಲಿದೆ ಚಿಕ್ಕ ಗ್ರಹ, Asianet Dialogueನಲ್ಲಿ ರಹಸ್ಯ ಬಿಚ್ಚಿಟ್ಟ ಖಗೋಳ ಶಾಸ್ತ್ರಜ್ಞ!