ಕೇರಳದ ಉಲ್ಕೆ ವಿಜ್ಞಾನಿ ಹೆಸರಿನಲ್ಲಿದೆ ಚಿಕ್ಕ ಗ್ರಹ, Asianet Dialogueನಲ್ಲಿ ರಹಸ್ಯ ಬಿಚ್ಚಿಟ್ಟ ಖಗೋಳ ಶಾಸ್ತ್ರಜ್ಞ!
Asianet Dialogue ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಇಂದಿನ ಅತಿಥಿ ಖಗೋಳ ಶಾಸ್ತ್ರಜ್ಞ ಡಾ. ಅಶ್ವಿನ್ ಶೇಖರ್. ಭೂಮಿಯಿಂದ ಬರೋಬ್ಬರಿ 600 ಮಿಲಿಯನ್ ಕಿ.ಮೀ ದೂರದಲ್ಲಿರುವ ಚಿಕ್ಕ ಗ್ರಹವೊಂದಕ್ಕೆ ಇವರ ಹೆಸರು ಇಡಲಾಗಿದೆ. ಏನಿದು 33928 ಅಸ್ವಿನ್‌ಶೇಖರ್ ಗ್ರಹ? ಈ ಯುವ ವಿಜ್ಞಾನಿ ಡಾ. ಅಶ್ವಿನಿ ಶೇಖರ್ ಮಾತುಗಳಲ್ಲೇ ಕೇಳಿ
ಬೆಂಗಳೂರು(ಆ.13) ಖಗೋಳ ವಿಜ್ಞಾನ ಸಮುದ್ರಕ್ಕಿಂತಲೂ ದೊಡ್ಡದು. ಈ ಕ್ಷೇತ್ರದಲ್ಲಿ ಭಾರತದ ಹಲವು ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ಇದೀಗ ಕೇರಳದ ಯುವ ವಿಜ್ಞಾನಿ ಡಾ.ಅಶ್ವಿನಿ ಶೇಖರ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಭೂಮಿಯಿಂದ 600 ಮಿಲಿಯನ್ ಕಿ.ಮೀ ದೂರದಲ್ಲಿರುವ ಈ ಗ್ರಹಕ್ಕೆ 33928 ಅಸ್ವಿನ್‌ಶೇಖರ್ ಎಂದು ಹೆಸರಿಡಲಾಗಿದೆ. ಈ ಸಾಧನೆಗೆ ಪಾತ್ರರಾದ ಕೆಲವೇ ಕೆಲವು ವಿಶ್ವದ ವಿಜ್ಞಾನಿಗಳ ಪೈಕಿ ಡಾ. ಅಶ್ವಿನ್ ಶೇಖರ್ ಒಬ್ಬರು. ಏಷ್ಯಾನೆಟ್ ಡೈಲಾಗ್ಸ್ ವಿಶೇಷ ಸಂದರ್ಶನದಲ್ಲಿ ಡಾ. ಅಶ್ವಿನ್ ಶೇಖರ್ ಭಾರತದಲ್ಲಿ ಖಗೋಳ ಶಾಸ್ತ್ರ, ಚಿಕ್ಕ ಗ್ರಹಕ್ಕೆ ಇಟ್ಟಿರುವ ಹೆಸರು ಸೇರಿದಂತೆ ಹಲವು ಕೂತಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.