ಕೊರೋನಾ ಸೋಂಕಿತ ಶಾಸಕನ ಭೇಟಿಯಾದ ಸಿಎಂಗೆ ಕ್ವಾರಂಟೈನ್!
ಅಹಮದಾಬಾದ್(ಏ. 15): ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ನಡೆಸಿದ ಸಭೆಯಲ್ಲಿ ಬಾಗಿಯಾದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇಡಾವಾಲರಲ್ಲಿ ಕೊರೋನಾ ಸೋಂಕು ಕಾಣಿಸಿಕೊಮಡಿತ್ತು. ಇದೀಗ ಈ ಬೆಳವಣಿಗೆ ಬೆನ್ನಲ್ಲಢ ಸಿಎಂ ವಿಜಯ್ ರೂಪಾನಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.. ಅಲ್ಲದೇ ಈ ಸಭೆಯಲ್ಲಿ ಪಾಲ್ಗೊಂಡವರನ್ನೂ ಪ್ರತ್ಯೇಕವಾಘಿರುವಂತೆ ಸೂಚಿಸಲಾಗಿದೆ.
ಹೌದು ಸದ್ಯ ಕೊರೋನಾ ಮಹಾಮಾರಿ ಇಡೀ ದೇಶವನ್ನೇ ಕಾಡುತ್ತಿದೆ. ಹೀಗರುವಾಗ ಗುಜರಾತ್ ಕಾಂಗ್ರೆಸ್ ಶಾಸಕರೊಬ್ಬರು ಸಿಎಂ ಜೊತೆಗಿನ ಸಭೆ ನಡೆದ ಕೆಲವೇ ಸಮಯದ ಬಳಿಕ ಕೊರೋನಾ ಸೋಂಕಿತರಾಗಿರುವುದು ಬಯಲಾಗಿತ್ತು. ಈ ಹಿನ್ನೆಲೆ ಸಭೆಯಲ್ಲಿ ಲಾಗ್ಗೊಂಡ ಸೀಎಂ ಸೇರಿದಂತೆ ಎಲ್ಲರನ್ನೂ ಕ್ವಾರಂಟೈನ್‌ಗೊಳಪಡಿಸಲಾಗಿದೆ.
ಸಿಎಂ ಜೊತೆ ಸಭೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕಗೆ ಸೋಂಕು, ಆಸ್ಪತ್ರೆಗೆ ದಾಖಲು!
ಈವರೆಗೂ ಸಿಎಂ ವಿಜಯ್ ರೂಪಾನಿ ಆರೋಗ್ಯವಾಗಿದ್ದು ಸೋಂಕಿನ ಯಾವುದೇ ಲಕ್ಷಣಗಳೂ ಕಂಡು ಬಂದಿಲ್ಲ