Asianet Suvarna News Asianet Suvarna News

G20 Summit: ಬಲಾಢ್ಯ ನಾಯಕರ ಆಗಮನ.. ದೆಹಲಿಯಲ್ಲಿ ಬಿಗಿ ಬಂದೋಬಸ್ತ್

ಇದೇ ಮೊದಲ ಬಾರಿಗೆ ಜಿ20 ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಕಳೆದೊಂದು ವರ್ಷದಿಂದ ಭಾರತದಲ್ಲಿ ನಡೆದ 200ಕ್ಕೂ ಹೆಚ್ಚು ಸಭೆಗಳ ಸಮಾರೋಪದ ರೀತಿಯಲ್ಲಿ ಶನಿವಾರ ಮತ್ತು ಭಾನುವಾರ ಶೃಂಗ ಸಭೆ ಆಯೋಜಿಸಲಾಗಿದೆ.

ಇಂದಿನಿಂದ ದೆಹಲಿಯಲ್ಲಿ ಐತಿಹಾಸಿಕ ಜಿ-20 ಶೃಂಗಸಭೆ(G20 Summit) ನಡೆಯಲಿದೆ. ದೆಹಲಿಯಲ್ಲಿ 2 ದಿನಗಳ ಕಾಲ ಜಾಗತಿಕ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ದೆಹಲಿಗೆ ವಿಶ್ವದ ಅತಿರಥ ನಾಯಕರು ಬಂದಿಳಿದ್ದಾರೆ. ಪ್ರಗತಿ ಮೈದಾನ ಭಾರತ ಮಂಟಪದಲ್ಲಿ ನಾಯಕರ ಸಮಾಗಮವಾಗಲಿದೆ. 15 ದೇಶಗಳ ನಾಯಕರ ಜತೆ ಮೋದಿ(Narendra Modi) ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮೊದಲ ಬಾರಿಗೆ ಜಿ-20 ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದೆ. 45 ಸಾವಿರ ರಕ್ಷಣಾ ಸಿಬ್ಬಂದಿಯಿಂದ ರಾಜಧಾನಿಯಲ್ಲಿ ಸೆಕ್ಯೂರಿಟಿ ನೀಡಲಾಗಿದೆ. ಎಲ್ಲೆಲ್ಲೂ ಪೊಲೀಸ್(police) ಸರ್ಪಗಾವಲು ಇದ್ದು, ಉಕ್ಕಿನ ಕೋಟೆಯಂತೆ ದೆಹಲಿಯಾಗಿದೆ. ಅಲ್ಲದೇ ದೆಹಲಿಯ ಬೀದಿಗಳೂ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆಗಮಿಸಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬೈಡೆನ್ ಆಗಮಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ನಿಖಿಲ್ ಕುಮಾರಸ್ವಾಮಿ ಪುತ್ರ ಮುಂದೇನಾಗ್ತಾರಂತೆ ಗೊತ್ತಾ? ನಟನಾ ಅಥವಾ ರಾಜಕಾರಣಿನಾ ?

Video Top Stories