ಸುಪ್ರೀಂ ಅಂಗಳದಲ್ಲಿ ಯಮುನೆ ಪ್ರತಾಪ: ಜಲಪ್ರಳಯದ ಹಿಂದಿದೆಯಾ ಯಾರೂ ಅರಿಯದ ರಹಸ್ಯ ?
ಪ್ರವಾಹ ಪೀಡಿತ ನಗರಕ್ಕೆ ಕಾರ್ಗತ್ತಲಿನ ಆಘಾತ!
ಜಲವ್ಯೂಹದಲ್ಲಿ ದೆಹಲಿ,ಹನಿ ನೀರಿಗೂ ಆಹಾಕಾರ!
ಊರಿಗೆ ಊರೇ ಜಲಾವೃತ..ಜನಸಾಮಾನ್ಯ ತತ್ತರ!
ನಮ್ಮ ರಾಷ್ಟ್ರ ರಾಜಧಾನಿ ದೆಹಲಿ.. ಈ ನಗರಕ್ಕೆ ಬಂದಿರೋ ದುಸ್ಥಿತಿ ನೋಡ್ತಾ ಇದ್ರೆ, ಆಘಾತ, ಅಚ್ಚರಿಯೂ ಆಗುತ್ತೆ. ಭಾರತದ ಅತಿ ಪ್ರಮುಖ ನಗರವೇ ನದಿ ನೀರಿನ ಪ್ರಹಾರಕ್ಕೆ(Flood) ತತ್ತರಿಸಿಹೋಗಿದೆ. ದೆಹಲಿಯ ಉದ್ದಗಲಕ್ಕೂ ತನ್ನ ಬಾಹುಗಳನ್ನ ಚಾಚಿ, ಆರ್ಭಟ ಮೆರಿತಾ ಇರೋದು, ದೆಹಲಿಯಲ್ಲಿ(Delhi) ಹರಿಯೋ ಯಮುನಾ ನದಿ(Yamuna river). ದೆಹಲಿಯ ರಸ್ತೆಗಳೆಲ್ಲಾ ನದಿಗಳಂತಾಗಿದೆ. ಜನ ದಿಕ್ಕುತಪ್ಪಿದ ಪಕ್ಷಿಗಳ ಹಾಗೆ ಪರಿತಪಿಸ್ತಾ ಇದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋದು ಅಂದ್ರೆ, ಅದು ಸಾಹಸಯಾತ್ರೆಯೇ ಆಗಿಬಿಟ್ಟಿದೆ. ಈ ಪ್ರವಾಹದ ತೀವ್ರತೆ ಎಷ್ಟಿದೆ ಅಂದ್ರೆ, ಹೆಚ್ಚೂಕಮ್ಮಿ 10 ಸಾವಿರ ಮಂದಿನಾ, ಸ್ಥಳಾಂತರಿಸಲಾಗಿದೆ. ಆದ್ರೆ ಆಘಾತಕಾರಿ ಸಂಗತಿ ಏನು ಅಂದ್ರೆ, ದೆಹಲಿಯ ಯಮುನಾ ನದಿಯ ಸುತ್ತ ಪ್ರವಾಹಕ್ಕೆ ಒಳಗಾಗುವ ತಗ್ಗು ಪ್ರದೇಶಗಳಲ್ಲಿ ಸುಮಾರು 41,000 ಜನರು ವಾಸ ಮಾಡ್ಕೊಂಡಿದಾರೆ. ಕ್ಷಣಕ್ಷಣಕ್ಕೂ ಅಪಾಯದ ಮಟ್ಟ ಹೆಚ್ಚಾಗುತ್ತಿದೆ. ಯಾವಾಗ ಯಾರಿಗೆ ಎಂಥಾ ಶಾಪವಾಗಿ ಬಿಡುತ್ತೋ ಅನ್ನೋ ಭಯ ಕೂಡ ಹೆಚ್ಚಾಗಿದೆ.
ಇದನ್ನೂ ವೀಕ್ಷಿಸಿ: ಕುಮಾರಸ್ವಾಮಿ ಜೊತೆ ಕುಸ್ತಿ..ರೇವಣ್ಣ ಜೊತೆ ದೋಸ್ತಿ: ದೇವೇಗೌಡರ ದೊಡ್ಡ ಮಗ ಅಂದ್ರೆ ಸಿದ್ದರಾಮಯ್ಯಗೆ ಬಲು ಪ್ರೀತಿ..!