ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ: ಅನ್ನದಾತನ ತಡೆಯಲು ಬ್ಯಾರಿಕೇಡ್, ತಂತಿಬೇಲಿ ನಿರ್ಮಾಣ
ರೈತರ ರಾಜಧಾನಿ ಪ್ರವೇಶ ತಡೆಯಲು ದೆಹಲಿಯ ಸಿಂಘು, ಘಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ(Haryana) ರೈತರು ಫೆ.13ರ ಮಂಗಳವಾರ ದೆಹಲಿ ಚಲೋಗೆ(Delhi chalo) ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ(Delhi) ಹೈ ಅಲರ್ಟ್ ಘೋಷಿಸಲಾಗಿದೆ. ಈ ಹೋರಾಟದಲ್ಲಿ 200 ರೈತ ಸಂಘಟನೆಗಳ 25,000ಕ್ಕೂ ಹೆಚ್ಚು ರೈತರು(Farmers) ಭಾಗಿಯಾಗುವ ನಿರೀಕ್ಷೆ ಇದೆ. ಯಾವುದೇ ಅಹಿತಕರ ಘಟನೆ ತಡೆಯಲು ರಾಷ್ಟ್ರ ರಾಜಧಾನಿಯಾದ್ಯಂತ ದೆಹಲಿ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಅಲ್ಲದೇ ದೆಹಲಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸಿಮೆಂಟ್ ಬ್ಲಾಕ್ ಹಾಕಿ ರೈತರನ್ನು ತಡೆಯಲು ಪ್ಲ್ಯಾನ್ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ರಾಮಮಂದಿರ ವಿರೋಧಿಸಿದವರಿಂದಲೂ ರಾಮಲಲ್ಲಾ ದರ್ಶನ: ಕುಟುಂಬದೊಂದಿಗೆ ಅಯೋಧ್ಯೆಗೆ ಬಂದ ದೆಹಲಿ ಸಿಎಂ !