ರಾಜಸ್ಥಾನದಲ್ಲಿ ಮತ್ತೆ ರೋಟೆಷನ್ ಪದ್ಧತಿ ಪಕ್ಕಾನಾ..? 1998ರಿಂದ ಪ್ರತಿ ಬಾರಿ ಅಧಿಕಾರ ಅದಲು- ಬದಲು!
ಕರ್ನಾಟಕಕ್ಕೆ ಅಭ್ಯರ್ಥಿಗಳನ್ನ ಕಳಿಸಿ ಎಂದು ಹೈಕಮಾಂಡ್ ಸೂಚನೆ
ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಕಣ್ಣಿಡಿ ಹೈಕಮಾಂಡ್ ಕಟ್ಟಾಜ್ಞೆ
ಹೈಕಮಾಂಡ್ ಸೂಚನೆ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್ ಅಲರ್ಟ್
ರಾಜಸ್ಥಾನದಲ್ಲಿ ಮತ್ತೆ ರೋಟೆಷನ್ ಪದ್ಧತಿ ಬರಲಿದೆ ಎಂದು ಹೇಳಲಾಗ್ತಿದೆ. ರಾಜಸ್ಥಾನದಲ್ಲಿ(Rajasthan) ಬಿಜೆಪಿಗೆ ಅಧಿಕಾರ ಪಕ್ಕಾ ಎಂದು ಸಮೀಕ್ಷೆಗಳು ಹೇಳುತ್ತಿವೆ. ರಾಜಸ್ತಾನದಲ್ಲಿ ಕಾಂಗ್ರೆಸ್(Congress) ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆ ಇದೆಯಂತೆ. ಸಿಎಂ ಗೆಹ್ಲೋಟ್, ಪೈಲಟ್ ಮುನಿಸೇ ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಬಿಜೆಪಿ(BJP) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಬೆಚ್ಚಿದಂತೆ ಕಾಣುತ್ತದೆ. ರಾಜಸ್ಥಾನ ಕಾಂಗ್ರೆಸ್ ಅಭ್ಯರ್ಥಿಗಳು ಕರ್ನಾಟಕಕ್ಕೆ(Karnataka) ಶಿಫ್ಟ್ ಆಗಿದ್ದು, ಎಕ್ಸಿಟ್ ಪೋಲ್ ಅಂಕಿ-ಸಂಖ್ಯೆ ನಂತರ ಕಾಂಗ್ರೆಸ್ ಎಚ್ಚೆತ್ತಿದೆ. ಕರ್ನಾಟಕಕ್ಕೆ ಅಭ್ಯರ್ಥಿಗಳನ್ನ ಕಳಿಸಿ ಎಂದು ಹೈಕಮಾಂಡ್ ಸೂಚನೆ ನೀಡಿದೆಯಂತೆ.
ಇದನ್ನೂ ವೀಕ್ಷಿಸಿ: ತೆಲಂಗಾಣದಲ್ಲಿ ಈ ಬಾರಿ ಅಧಿಕಾರ ಬದಲಾಗುತ್ತಾ..? ಕಾಂಗ್ರೆಸ್ -ಬಿಆರ್‌ಎಸ್ ನಡುವೆ ಭಾರೀ ಪೈಪೋಟಿ !